ಮಡಿಕೇರಿ, ಮೇ 23: ಮರಗೋಡುವಿನ ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಗೌಡ ಕುಟುಂಬಗಳ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪಾಣತ್ತಲೆ, ಬಡುವಂಡ್ರ, ಕೊಡೆಕಲ್ ಸೇರಿದಂತೆ ಕಡ್ಯದ, ಕೋಳಿಬೈಲು, ಕಾಳೇರಮ್ಮನ ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಬಡುವಂಡ್ರ ತಂಡ ಬೊಳ್ಳೂರು ತಂಡವನ್ನು 6-0 ಗೋಲಿನಿಂದ ಸೋಲಿಸಿತು. ಬಡುವಂಡ್ರ ಪರ ಭರತ್ 1, ಸಂಜಯ್ 2, ಪುನೀತ್ 3 ಗೋಲು ಬಾರಿಸಿದರು. ಮೂಲೆಮಜಲು ತಂಡ ಚೆರಿಯಮನೆ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ತಂಡದ ಪರ ಶರತ್ 2 ಗೋಲು ಬಾರಿಸಿದರೆ, ಮತ್ತೊಂದು ಚೆರಿಯಮನೆ ತಂಡದ ಆಟಗಾರರು ಸ್ವಯಂ ಗೋಲು ಬಾರಿಸಿಕೊಂಡರು. ಚೆರಿಯಮನೆ ತಂಡದ ಪರ ರಕ್ಷವ್ 1 ಗೋಲು ಬಾರಿಸಿದರು.
ಪಾಣತ್ತಲೆ ತಂಡ ಪರಿಚನ ಬಿ ತಂಡವನ್ನು 5-0 ಗೋಲಿನಿಂದ ಸೋಲಿಸಿತು. ತಂಡದ ಪರ ನಿತಿನ್ 2, ಪ್ರವೀಣ್ 2 ಹಾಗೂ ದರ್ಶನ್ 1 ಗೋಲು ಬಾರಿಸಿದರು. ಕೊಳಂಬೆ ತಂಡ ಕುಂತೋಡಿ 2-0 ಗೋಲಿನಿಂದ ಮಣಿಸಿತು. ತಂಡದ ಪರ ಉದಯ 1 ಗೋಲು ಬಾರಿಸಿದರೆ, ಮತ್ತೊಂದು ಕುಂತೋಡಿ ತಂಡದ ಸ್ವಯಂ ಗೋಲಾಗಿತ್ತು.
ಬಡುವಂಡ್ರ ತಂಡ ಮೂಲೆಮಜಲು ತಂಡವನ್ನು 3-0 ಗೋಲಿನಿಂದ ಸೋಲಿಸಿತು. ತಂಡದ ಪರ ದುಷ್ಯಂತ್ 1, ಸುಜಯ್ 2 ಗೋಲು ಬಾರಿಸಿದರು. ಕಡ್ಯದ ತಂಡ ಕೊಳಂಬೆ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಕಡ್ಯದ ಪ್ರವೀಣ್ 2 ಗೋಲು ಬಾರಿಸಿದರು. ಕೊಡೆಕಲ್ ತಂಡ ಕೋಡಿ ತಂಡವನ್ನು 8-0 ಗೋಲಿನಿಂದ ಮಣಿಸಿತು. ಕೊಡೆಕಲ್ ದೀಪು 3, ವಿನು 3, ಮಧು 2 ಗೋಲು ಬಾರಿಸಿದರು.
ಕಾಳೇರಮ್ಮನ ತಂಡ ಚಂಡಿರ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ವಿಜೇತ ತಂಡದ ಪರ ಅಶ್ವತ್, ಹೇಮಂತ್, ಮೋಹನ್ದಾಸ್ ಗೋಲು ಗಳಿಸಿದರು.