ಮಡಿಕೇರಿ, ಮೇ 23: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ನಗರದ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಮುಂದಿನ 3 ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿ ಸಭೆಯು ಇಂದು ನಡೆಯಿತು.

ಸಮಿತಿಯ ನೂತನ ಅಧ್ಯಕ್ಷರಾಗಿ ಪುಲಿಯಂಡ ಕೆ. ಜಗದೀಶ್ ಅವರನ್ನು ಆಯ್ಕೆ ಮಾಡಲಾಗಿದೆ. ಸದಸ್ಯರುಗಳಾಗಿ ಟಿ.ಹೆಚ್. ಉದಯ ಕುಮಾರ್, ಎ.ಎಸ್. ಪ್ರಕಾಶ್ ಆಚಾರ್ಯ, ಕೆ. ಸುನೀಲ್ ಕುಮಾರ್, ಕುರಿಕಡ ಆನಂದ, ಕನ್ನಂಡ ಕವಿತಾ ಕಾವೇರಮ್ಮ, ಯು.ಸಿ. ದಮಯಂತಿ, ಬಿ.ಜಿ. ನಾರಾಯಣ ಭಟ್, ಪಿ.ಹೆಚ್. ಸೀತಾ ಚಿಕ್ಕಣ್ಣ ಎಂದು ಓಂಕಾರೇಶ್ವರ ದೇವಾಲ ಯದ ಕಾರ್ಯನಿರ್ವಾಹಕ ಅಧಿಕಾರಿ ಸಂಪತ್ ಕುಮಾರ್ ತಿಳಿಸಿದ್ದಾರೆ.