ಗೋಣಿಕೊಪ್ಪ ವರದಿ, ಮೇ 23: ವಾಹನ ಡಿಕ್ಕಿಯಾಗಿ ವೇಷಧಾರಿ ಗಂಭೀರ ಗಾಯಗೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಮುತ್ತಪ್ಪ (40) ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ವೇಷಧಾರಿ. ತಲೆ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರುವಿಗೆ ರವಾನಿಸಲಾಗಿದೆ. ಬುದವಾರ ರಾತ್ರಿ 8 ಗಂಟೆ ಸುಮಾರಿಗೆ ಪಟ್ಟಣದ ಪಾಲಿಬೆಟ್ಟ ರಸ್ತೆಯಲ್ಲಿ ಘಟನೆ ನಡೆದಿದೆ.
ಹೆಬ್ಬಾಲೆ ಬೋಡ್ ನಮ್ಮೆ ಪ್ರಯುಕ್ತ ಸಾಂಪ್ರದಾಯಿಕವಾಗಿ ಮನೆ ಮನೆಗೆ ವಿವಿಧ ವೇಷ ತೊಟ್ಟುಕೊಂಡು ಬೇಡುವದು ವಾಡಿಕೆ. ಇದರಂತೆ ಪಟ್ಟಣಕ್ಕೆ ಬರುತ್ತಿದ್ದಾಗ ವಾಹನ ಡಿಕ್ಕಿಯಾಗಿದೆ. ತಲೆಯ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯ ಶರತ್ ಗಾಯಾಳುವನ್ನು ಆಸ್ಪತ್ರೆ ಸೇರಿಸಲು ನೆರವಾದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರುವಿಗೆ ರವಾನಿಸಲಾ ಯಿತು. ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.