ವೀರಾಜಪೇಟೆ, ಮೆ. 22 : ದೇಶದ ಹಲವೆಡೆಗಳಲ್ಲಿ ಆಂತರಿಕ ಗಲಭೆಗಳು, ಮತವಿರೋಧಿ ಚಟುವಟಿಕೆಗಳು ಧರ್ಮಗಳ ಮಧ್ಯೆ ಕಲಹಗಳು ಸಂಭವಿಸುತ್ತಿರುವದ್ದನ್ನು ಮನಗಂಡು ದೇಶದಲ್ಲಿ ಶಾಂತಿ ನೆಮ್ಮದಿಯ ವಾತಾವರಣವನ್ನು ಸೃಷ್ಟಿ ಮಾಡಲು ದೇಶ ಪರ್ಯಟನೆ ಮಾಡುತ್ತಿರುವದಾಗಿ ಕೇರಳದ ಚಾಲಕುಡಿ ನಿವಾಸಿ ಅರ್. ಪ್ರಕಾಶ್‍ತಿಳಿಸಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆ ಚಾಲಕುಡಿ ತಾಲೂಕು ಪಲೆಕ್ಕಲ್ ನಿವಾಸಿ ಅರ್. ಪ್ರಕಾಶ್ (66) ವರ್ಷ ಎಂಬ ವೃದ್ಧ ಸುಕ್ಕು ಹಿಡಿದ ದೇಹ, ಕಾಲಿಗೆ ಪಾದರಕ್ಷೆ ಹಾಕದೆ ಬೆನ್ನ ಮೇಲೆ ಬ್ಯಾಗ್ ಜೋತುಹಾಕಿಹೊಂಡು ತನ್ನ ಬ್ರೇಕ್ ಮತ್ತು ಬೆಲ್ ಇಲ್ಲದ ಸೈಕಲ್‍ನೊಂದಿಗೆ. ಕಳೆದ ಜನವರಿ 11 ರಂದು ಆಂಧ್ರ ಪ್ರದೇಶದ ತಿರ್‍ತನ್ನಿ ತಿರುಪತಿ ಸಮಿಪದ ಊರಿನಿಂದ ಸೈಕಲ್ ಯಾತ್ರೆ ಆರಂಭಿಸಿದ್ದಾರೆ. ಆಂಧ್ರ ಪ್ರದೇಶದ ಮುಖ್ಯ ಪಟ್ಟಣಗಳಲ್ಲಿ ಸಂಚರಿಸಿ, ತಮಿಳುನಾಡು ರಾಜ್ಯದ ಮುಖ್ಯ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಶಾಂತಿಯ ಸಂದೇಶವನ್ನು ಸಾರುತ್ತಾ ಕೇರಳ ರಾಜ್ಯದಲ್ಲಿ ಪ್ರವಾಸ ಮಾಡಿದ್ದು ಇರಟ್ಟಿ ,ಮಾಕೂಟ್ಟ ಗಡಿ ಭಾಗದಿಂದ ಕರ್ನಾಟಕ ರಾಜ್ಯವನ್ನು ಪ್ರವೇಶ ಮಾಡಿದರು. ಕರ್ನಾಟಕದ ಹಲವು ಭಾಗಗಳಲ್ಲಿ ಸಂಚಾರ ಮಾಡಲಿದ್ದು ಮುಂದೆ ಮಂಗಳೂರು ಮಾರ್ಗವಾಗಿ ಗೋವ ರಾಜ್ಯದ ಕಡೆಗೆ ಸೈಕಲ್ ಯಾತ್ರೆ ಮುಂದೆ ಸಾಗಲಿದೆ.
ಯಾತ್ರೆ ವೇಳೆ ವಸತಿ ಮತ್ತು ಆಹಾರದ ಬಗ್ಗೆ ಪತ್ರಿಕೆಯು ಕೇಳಿದಾಗ, ತಾನು ಪ್ರವಾಸಿ ಮತ್ತು ಸಂಚಾರಿ ಸೈಕಲ್‍ನಲ್ಲಿ ಯಾತ್ರೆ ಮಾಡುವ ಸಂದರ್ಭ ಅಪರಿಚಿತರು ಧನ ಸಹಾಯ ಮಾಡುತ್ತಾರೆ ಮತ್ತು ಕೆಲವು ಭಾಗಗಳಲ್ಲಿ ಸರ್ಕಾರಿ ಉದ್ಯೋಗಿಗಳು ಸಹಾಯ ಮಾಡಿರುತ್ತಾರೆ ಕೆಲವರು ಅನುಕಂಪದ ಆಧಾರದ ಮೇಲೆ ಧನ ಸಹಾಯ ಮಾಡಿ ಯಾತ್ರೆಯ ಉದ್ದೇಶವನ್ನು ತಿಳಿದುಕೊಂಡು ಹೆಚ್ಚಿನ ಹಣ ಒದಗಿಸಿದ್ದಾರೆ ತಂಗಲು ಸರ್ಕಾರಿ ಕಟ್ಟಡಗಳ ಮಧ್ಯೆ ಅಥವಾ ಮನೆಗಳ ಆವರಣದಲ್ಲಿ ತಂಗಿ ನಂತರ ಹೊರಡುತ್ತೇನೆ ಎಂದರು.