ವೀರಾಜಪೇಟೆ, ಮೇ. 22 : ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಬಹು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅಧಿಕಾರದಿಂದ ವಂಚನೆಗೊಳಗಾಗಿದೆ. ಕ್ಷೇತ್ರದ ಅಭಿವೃದ್ಧಿ, ಜನಪರ ಕೆಲಸಗಳು ರಾಜಕೀಯ ರಹಿತವಾಗಿ ಮುಂದು ವರೆಯಲಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿದರು.
ಇಲ್ಲಿನ ತಾಲೂಕು ಬಿಲ್ಲವ ಸಮಾಜದಿಂದ ಜೂನಿಯರ್ ಕಾಲೇಜು ಮೈದಾನ ದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಬಿಲ್ಲವ ಕಪ್ ಕ್ರೀಡೋತ್ಸವದ ಸಮಾರೋಪದಲ್ಲಿ ಅತಿಥಿಯಾಗಿ ಭಾಗವಹಿಸಿ ಬಿಲ್ಲವ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಏಪ್ರಿಲ್, ಮೇ ತಿಂಗಳಲ್ಲಿ ಕೊಡಗಿನ ಪ್ರತಿಯೊಂದು ಸಮುದಾಯದ ಸಂಘಟನೆಗಳು ಕ್ರೀಡೆಗಳನ್ನು ಹಬ್ಬ, ಉತ್ಸವವಾಗಿ ಆಚರಿಸುತ್ತಿವೆ. ಇದರಿಂದ ಸಮುದಾಯ ಬಾಂಧವರು ಒಮ್ಮತವನ್ನು ಸಾಧಿಸಲು ಅನುಕೂಲವಾಗುತ್ತದೆ. ವಿವಿಧತೆ ಯಲ್ಲಿ ಏಕತೆಯನ್ನು ಸಾಧಿಸುತ್ತಿರುವ ವಿವಿಧ ಸಮುದಾಯಗಳ ಸಂಘಟನೆಗಳು ಸಂಪ್ರದಾಯ, ಸಂಸ್ಕøತಿ, ಪದ್ಧತಿ ಪರಂಪರೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ಸಮುದಾಯಗಳ ಆಚರಣೆ ರಾಷ್ಟ್ರಕ್ಕೆ ಮಾದರಿ ಯಾಗಲಿದೆ ಎಂದರು.
ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಬಿ. ಎಸ್. ಚಂದ್ರಶೇಖರ್, ಗೌ: ಅಧ್ಯಕ್ಷ ಬಿ. ರಾಜ. ಉಪಾಧ್ಯಕ್ಷ ಬಿ. ಎಂ. ಗಣೇಶ್, ಡಿ.ವೈಎಸ್.ಪಿ. ಲಿಂಗಪ್ಪ, ಮಡಿಕೇರಿಯ ತಾಲೂಕು ಅಧ್ಯಕ್ಷ ರಾಜಶೇಖರ್, ಬಿ. ಕೆ. ಜನಾರ್ಧನ್, ಸಂಘದ ಜಿಲ್ಲಾಧ್ಯಕ್ಷ ರಘು ಆನಂದ್, ಬಿ. ಎಂ. ಸತೀಶ್ ಮತ್ತಿತರರು ಹಾಜರಿದ್ದರು.