ಕರಿಕೆ, ಮೇ 22: ಇಲ್ಲಿಗೆ ಸಮೀಪದ ಚೆತ್ತುಕಾಯ ಶ್ರೀ ವನಶಾಸ್ತಾವು ಹಾಗೂ ಕರಿಚಾಮುಂಡಿ ದೇವರ ವಾರ್ಷಿಕ ಉತ್ಸವವು ಎರಡುದಿನಗಳ ಕಾಲ ದೇವಲಾಯದ ತಂತ್ರಿಗಳಾದ ಕಾಸರಗೋಡುವಿನ ವೇದ ಮೂರ್ತಿ ಶ್ರೀ ಶ್ರೀಪತಿ ಅರಳಿತ್ತಾಯರವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿ ಯಿಂದ ಜರುಗಿತು. ಚಾಮುಂಡಿ ಹಾಗೂ ಗುಳಿಗ ದೈವಗಳ ಕೋಲ ನಡೆಯಿತು. ನಂತರ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಮಹಿಳೆಯರು ಹಸಿರು ಹೊರೆಕಾಣಿಕೆ ಹೊತ್ತು ಮೆರವಣಿಗೆಯಲ್ಲಿ ಬಂದು ದೇವಾಲಯದಲ್ಲಿ ಸಮರ್ಪಿಸಿದರು.