ಮಡಿಕೇರಿ, ಮೇ 22: 33/11ಕೆವಿ ಕುಶಾಲನಗರ-ಸೋಮವಾರಪೇಟೆ ವಿದ್ಯುತ್ ಮಾರ್ಗದ ತುರ್ತು ನಿರ್ವಹಣೆ ಹಾಗೂ ಮಳೆಗಾಲದ ಮುಂಜಾಗ್ರತೆಗಾಗಿ ವಿದ್ಯುತ್ ಮಾರ್ಗಗಳ ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಾಗುವದರಿಂದ ತಾ. 23ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಸಂಜೆÀ 5.30 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು.
ಸೋಮವಾರಪೇಟೆ ಟೌನ್ ಪಂಚಾಯಿತಿ, ಚೌಡ್ಲು, ಹಾನಗಲ್ಲು, ದೊಡ್ಡಮಳ್ತೆ ಪಂಚಾಯಿತಿ, ಐಗೂರು ಅಬ್ಬೂರುಕಟ್ಟೆ, ಕಿರಂಗಂದೂರು ಪಂಚಾಯಿತಿ, ನಿರುಗಳೆಲೆ, ಶಾಂತಳ್ಳಿ, ಬೆಟ್ಟದಹಳ್ಳಿ, ತೋಳೂರುಶೆಟ್ಟಳ್ಳಿ, ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವದಿಲ್ಲ ಎಂದು ಪ್ರಕಟಣೆ ತಿಳಿಸಿದೆ.