ಮಡಿಕೇರಿ, ಮೇ. 22: ಮಡಿಕೇರಿ ನಗರದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿರುತ್ತದೆ. ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತರಾಗಬೇಕಿದ್ದು, ಮನೆ ಬಿಟ್ಟು ಬೇರೆ ಊರಿಗೆ ಹೋಗುವ ಸಂದರ್ಭ ಕಡ್ಡಾಯವಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವದು. ಮನೆ ಬಿಟ್ಟು ಹೋಗುವ ಸಂದರ್ಭ ತಮ್ಮ ಬಳಿ ಇರುವ ಚಿನ್ನಾಭರಣಗಳನ್ನು ಮತ್ತು ನಗದನ್ನು ಬ್ಯಾಂಕಿನಲ್ಲಿಟ್ಟು ಹೋಗುವದು. ಯಾವದೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಮಡಿಕೇರಿ ನಗರ ಠಾಣೆಯ ದೂರವಾಣಿ ಸಂಖ್ಯೆ 08272-229333, 9480804945ಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಠಾಣಾಧಿಕಾರಿ ಕೋರಿದ್ದಾರೆ.