ಮಡಿಕೇರಿ, ಮೇ 22: ಕೊಡಗು ಫುಟ್ಬಾಲ್ ಅಕಾಡೆಮಿ ಮರಗೋಡು ವತಿಯಿಂದ ನಡೆಯುತ್ತಿರುವ ಗೌಡ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆರು ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪಂದ್ಯಾಟದಲ್ಲಿ ಮುಕ್ಕಾಟಿ ‘ಬಿ’ ತಂಡ ಮಂಞಂಡ್ರ ತಂಡದ ವಿರುದ್ಧ ಗೆಲುವು ಸಾಧಿಸಿತು. ಮುಕ್ಕಾಟಿ ಸೋನ 1, ಯಶವಂತ್ 1, ಗಗನ್ 1, ಲೋಹಿತ್ 1 ಗೋಲು ಬಾರಿಸಿದರು. ಮಂಞಂಡ್ರ ಪರ ಹರೀಶ್ 1, ಪ್ರೇಮ್ 1 ಗೋಲು ಬಾರಿಸಿದರು.

ಕೊಂಪುಳೀರ ‘ಬಿ’ ತಂಡ ಕುಯ್ಯಮುಡಿ ತಂಡದ ವಿರುದ್ಧ ಗೆಲುವು ಸಾಧಿಸಿತು. ಕೊಂಪುಳಿರ ನಿತಿನ್ 1, ಪುನೀತ್ 1, ಗೋಲು ಬಾರಿಸಿದರು. ಉಳುವಾರನ ತಂಡ ಕುಡಕಂಡಿ ತಂಡದ ವಿರುದ್ಧ ಗೆಲುವು ಸಾಧಿಸಿತು. ಉಳುವಾರನ ದರ್ಶನ್ 2 ಹೇಮಂತ್ 1 ಗೋಲು ಬಾರಿಸಿದರು.

ಕುಲ್ಲಚೆಟ್ಟಿ ತಂಡ ತಡಿಯಪ್ಪನ ತಂಡದ ವಿರುದ್ಧ ಗೆಲುವು ಸಾಧಿಸಿತು. ಕುಲ್ಲಚೆಟ್ಟಿ ತಂಡದ ಪರ ರಂಜು 2, ಗಗನ್ 1, ಸಂಜು 1, ಜಿತೇಶ್ 1 ಗೋಲು ಬಾರಿಸಿದರು. ತಂಡಿಯಪ್ಪನ ಪರ ಸಂಜಯ್ 1, ಶ್ರೇಯಸ್ 1, ಜಗನ್ 1 ಗೋಲು ಬಾರಿಸಿದರು. ಮುಕ್ಕಾಟಿ ‘ಬಿ’ ತಂಡ ಪೊಡನೋಳನ ತಂಡದ ವಿರುದ್ಧ ಗೆಲುವು ಸಾಧಿಸಿತು. ಮುಕ್ಕಾಟಿ ಲೋಹಿತ್ 3 ಗೋಲು ಬಾರಿಸಿದರು. ಕೊಂಪುಳೀರ ತಂಡ ತೇನನ ತಂಡದ ವಿರುದ್ಧ ಗೆಲುವು ಸಾಧಿಸಿತು. ಕೊಂಪುಳೀರ ಪುನೀತ್ 2, ನಿತಿನ್ 2 ಗೋಲು ಬಾರಿಸಿದರು. ಯಾಲದಾಳು ತಂಡ ಉಳುವಾರನ ತಂಡದ ವಿರುದ್ಧ ಗೆಲುವು ಸಾಧಿಸಿತು. ಯಾಲದಾಳು ಪ್ರಣವ್ 1, ದುಷ್ಯಂತ್ 1 ಗೋಲು ಬಾರಿಸಿದರು.

ಕೋಚನ, ಕೈಕೇರಿ ಮುಕ್ಕಾಟಿ, ಮುಕ್ಕಾಟಿ ‘ಬಿ’, ಕೊಂಪುಳೀರ ‘ಬಿ’, ಕೂಡಕಂಡಿ, ಯಾಲದಾಳು ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.