ಸುಂಟಿಕೊಪ್ಪ, ಮೇ 22: ಸುಂಟಿಕೊಪ್ಪ ಲಯನೆಸ್ ಹಾಗೂ ಲಯನ್ಸ್ ಕ್ಲಬ್‍ಗೆ ಜಿಲ್ಲಾ ರಾಜ್ಯಪಾಲ ಹೆಚ್.ಆರ್. ಹರೀಶ್ ತಾ.23 ರಂದು (ಇಂದು) ಭೇಟಿ ನೀಡಲಿದ್ದಾರೆ. ಸಂಜೆ 7 ಗಂಟೆಗೆ ವಿಎಸ್‍ಎಸ್‍ಎನ್‍ನ ಗುಂಡುಗುಟ್ಟಿ ಮಂಜುನಾಥಯ್ಯ ಸಭಾಂಗಣದಲ್ಲಿ ಸುಂಟಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಕೆ.ರಕ್ಷಿತ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.