ಶಾಸಕ ರಂಜನ್

ಸುಂಟಿಕೊಪ್ಪ, ಮೇ 22: ಐಗೂರಿನ ಸತೀಶ್ ಫ್ರೆಂಡ್ಸ್ ಕ್ರಿಕೆಟರ್ಸ್ ವತಿಯಿಂದ ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟವನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಿದರು.

ಕ್ರೀಡೆಯಲ್ಲಿ ಭಾಗವಹಿಸುವದರಿಂದ ವ್ಯಕ್ತಿಯ ಮಾನಸಿಕ, ಶಾರೀರಿಕ ಸದೃಢತೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಪಂದ್ಯಾಟದಲ್ಲಿ 15 ತಂಡಗಳು ಭಾಗವಹಿಸಿದ್ದು, ಟೀಮ್ ಮ್ಯಾಕ್ಸ್‍ವೆಲ್ ಕೊಡಗು ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.

ಟ್ರೋಫಿ ಹಾಗೂ 15,000 ರೂ ನಗದು ಪಡೆದು ವಿಜಯದ ನಗೆ ಬೀರಿದರೆ ಐಗೂರು ಸತೀಶ್ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ 10,000 ರೂ ನಗದು ವೈಯಕ್ತಿಕ ಟ್ರೋಫಿ ಬಹುಮಾನವನ್ನು ತನ್ನದಾಗಿಸಿಕೊಂಡಿತು.