ಮಡಿಕೇರಿ, ಮೇ 21: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಡ್ಲಂಡ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ತಾ. 22ರಂದು (ಇಂದು) ಪ್ರೀ ಕ್ವಾರ್ಟರ್ ಫೈನಲ್ ನಡೆಯಲಿದೆ.

ಇಂದು ನಡೆದ ಪಂದ್ಯದಲ್ಲಿ ನೆರವಂಡ ತಂಡ ಚಕ್ಕೇರ ತಂಡವನ್ನು ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಚಕ್ಕೇರ 8 ಓವರ್‍ಗೆ 2 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿತು. ನೆರವಂಡ ತಂಡ 8 ಓವರ್‍ಗೆ 2 ವಿಕೆಟ್ ಕಳೆದುಕೊಂಡು 51 ರನ್ ಬಾರಿಸಿ ಜಯ ಸಾಧಿಸಿತು. 15 ರನ್ ಬಾರಿಸಿದ ಚಕ್ಕೇರ ಕಾರ್ಯಪ್ಪ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.

ಮತ್ತೊಂದು ಪಂದ್ಯದಲ್ಲಿ ಮಾಳೆಯಂಡ ತಂಡ ತಂಬುಕುತ್ತಿರ ತಂಡದ ವಿರುದ್ಧ ಸೋಲನುಭವಿಸಿತು. ಮೊದಲು ಬ್ಯಾಟ್ ಮಾಡಿದ ತಂಬುಕುತ್ತಿರ 6 ವಿಕೆಟ್ ಕಳೆದುಕೊಂಡು 59 ರನ್ ಬಾರಿಸಿತು. ಮಾಳೆಯಂಡ ತಂಡ 8 ವಿಕೆಟ್ ಕಳೆದುಕೊಂಡು ಕೇವಲ 35 ರನ್ ಬಾರಿಸಿ ಸೋಲನುಭವಿಸಿತು. ಮಾಳೆಯಂಡ ಪ್ರದೀಪ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಅಚ್ಚಪಂಡ ತಂಡ ಕಾಣತಂಡ ತಂಡವನ್ನು ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಅಚ್ಚಪಂಡ 6 ವಿಕೆಟ್‍ಗೆ 64 ರನ್ ಬಾರಿಸಿತು. ಕಾಣತಂಡ 53 ರನ್ ಗಳಿಸಿ ಆಲೌಟಾಯಿತು. ಕಾಣತಂಡ ವಿಪಿನ್ 18 ರನ್ ಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.