ಕುಶಾಲನಗರ, ಮೇ 21: ಕುಶಾಲನಗರದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ. ಶಿಕ್ಷಕರಾದ ಟಿ.ಬಿ. ಮಂಜುನಾಥ್ ಅವರು ಮನೆಯಲ್ಲಿ ಇಲ್ಲದ ಸಂದರ್ಭ ಕಳ್ಳರು ಹಿಂಬಾಗಿಲ ಬೀಗ ಒಡೆದು ಚಿನ್ನ, ನಗದು ಕಳವು ಮಾಡಿದ್ದಾರೆ.ಸ್ಥಳಕ್ಕೆ ಕುಶಾಲನಗರ ಪಟ್ಟಣ ಪೊಲೀಸರು ಭೇಟಿ ನೀಡಿದ್ದು ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.