ನಾಪೋಕ್ಲು, ಮೇ 20: ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಕೌಟುಂಬಿಕ ಹಾಕಿ ಉತ್ಸವ ಹಾಕಿ ಕ್ರೀಡೆಯೊಂದಿಗೆ ಜನಾಂಗವನ್ನು ಕುಟುಂಬದ ಸದಸ್ಯರನ್ನು ಪರಸ್ಪರ ಬೆಸೆಯುವಂತೆ ಮಾಡಿದೆ. ಈ ಹಬ್ಬವನ್ನು ಹುಟ್ಟು ಹಾಕಿದ ಪಾಂಡಂಡ ಎಂ. ಕುಟ್ಟಪ್ಪ ಅವರು ಸ್ಮರಣೀಯರು ಎಂದು ಮಾಜಿ ಒಲಿಂಪಿಯನ್ ಮನೆಯಪಂಡ ಎಂ. ಸೋಮಯ್ಯ ಹೇಳಿದರು.ನಾಪೋಕ್ಲುವಿನಲ್ಲಿ ನಡೆದ ಕುಲ್ಲೇಟಿರ ಕಪ್‍ನ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಈ ಉತ್ಸವ ಸದಾಕಾಲ ಮುಂದುವರಿಯಬೇಕು. ಹಾಕಿ ಉತ್ಸವ ಯುವ ಆಟಗಾರರಿಗೆ ಪ್ರೇರಣೆ ನೀಡುವದರೊಂದಿಗೆ ದೇಶವನ್ನು ಪ್ರತಿನಿಧಿಸಲು ಉತ್ತೇಜನ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ನಾಲ್ಕುನಾಡು ವ್ಯಾಪ್ತಿಯು ಹಿಂದುಳಿದ ಪ್ರದೇಶವಾಗಿದ್ದರೂ ಇಲ್ಲಿ ಅದ್ಭುತವಾದ ಕ್ರೀಡಾಪ್ರತಿಭೆಗಳಿವೆ. ಅವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಗಳನ್ನು ಬೆಳಗಬೇಕಾದರೆ ಇಲ್ಲಿ ಟರ್ಫ್ ಹಾಕಿ ಮೈದಾನ ನಿರ್ಮಿಸುವದು ಅವಶ್ಯಕವಾಗಿದೆ ಎಂದು ರಾಜ್ಯ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಮನೆಯಪಂಡ ಪೆÇನ್ನಪ್ಪ ಅಭಿಪ್ರಾಯಪಟ್ಟರು.
ಮತ್ತೋರ್ವ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
(ಮೊದಲ ಪುಟದಿಂದ) ಈ ಹಿಂದೆ ಕೊಡವ ಹಾಕಿ ನಮ್ಮೆಗೆ ಸರಕಾರದ ಅನುದಾನ ದೊರೆತಿದೆ. ಆದರೆ ಕಳೆದ ಬಾರಿಯ ಬಿದ್ದಾಟಂಡ ಕಪ್ ಹಾಕಿ ನಮ್ಮೆಗೆ ಸರಕಾರದ ಅನುದಾನ ಲಭಿಸಿಲ್ಲ. ಇದನ್ನು ಯಾವ ಕಾರಣಕ್ಕೂ ಮೊಟಕುಗೊಳಿಸಬಾರದು ಎಂದು ಅವರು ಹೇಳಿದರು.
ಬೆಂಗಳೂರು ರೇವ ಯೂನಿವರ್ಸಿಟಿ ಕುಲಪತಿ ಡಾ. ಎಸ್.ವೈ.ಕುಲಕರ್ಣಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಚೇರಂಡ ಕಿಶನ್, ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕಲಿಯಂಡ ಸಿ.ನಾಣಯ್ಯ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲ್ಲೇಟಿರ ಕುಟುಂಬದ ಪಟ್ಟೆದಾರ ಮಾದಪ್ಪ ವಹಿಸಿದ್ದರು.
ವೇದಿಕೆಯಲ್ಲಿ ಐಪಿಎಸ್ ಅಧಿಕಾರಿ ಯತೀಶ್, ಡಿವೈಎಸ್‍ಪಿ ಸುಂದರ್ ರಾಜ್, ಅರೆಯಡ ಪವಿನ್ ಪೆÇನ್ನಣ್ಣ, ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ, ಮತ್ತಿತರರು ಇದ್ದರು.
ಬಟ್ಟಿರ ಡಯನಾ ಸಂಜು ಪ್ರಾರ್ಥನೆ, ಹಾಕಿ ನಮ್ಮೆಯ ಸಂಚಾಲಕ ಕುಲ್ಲೇಟಿರ ಅರುಣ್ ಬೇಬ ಸ್ವಾಗತ, ಚೆಪ್ಪುಡಿರ ಕಾರ್ಯಪ್ಪ, ಚೋಕಿರ ಅನಿತಾ ಪ್ರವೀಣ್ ನಿರೂಪಿಸಿ, ವಂದಿಸಿದರು. ಕಾರ್ಯದರ್ಶಿ ಅಜಿತ್ ನಾಣಯ್ಯ ಸೇರಿದಂತೆ ಸಂಘಟಕರು ಯಶಸ್ಸಿನಲ್ಲಿ ಭಾಗಿಗಳಾಗಿದ್ದರು.
-ಚಿತ್ರ ವರದಿ: ಪ್ರಭಾಕರ/ ದುಗ್ಗಳ.