ನಾಪೋಕ್ಲು, ಮೇ 13: ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಕುಲ್ಲೇಟಿರ ಹಾಕಿ ನಮ್ಮೆಯ ವೀಕ್ಷಕ ವಿವರಣೆಗಾರರಲ್ಲಿ ಮಣವಟ್ಟೀರ ದಯಾ ಚಿಣ್ಣಪ್ಪ ಒಬ್ಬರು.

ಸಾಹಿತ್ಯ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಹಾಕಿ ನಮ್ಮೆಯ ವೀಕ್ಷಕ ವಿವರಣೆಗಾರರಾಗಿ, ಸಭೆ-ಸಮಾರಂಭಗಳಲ್ಲಿ ನಿರೂಪಣೆಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ. ಬಲ್ಲಮಾವಟಿಯ ಜನಮನ ಕಲಾ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಕುಲ್ಲೇಟಿರ ಹಾಕಿ ಉತ್ಸವದಲ್ಲಿ ಇವರು ಉಳುವಂಗಡ ಲೋಹಿತ್ ಭೀಮಯ್ಯ ಸಹಯೋಗದೊಂದಿಗೆ ನಿರ್ಮಿಸಿದ ಜಭ್ಬೂಮಿ ಸಿ.ಡಿ. ಬಿಡುಗಡೆಗೊಳ್ಳುತ್ತಿದೆ.

ದಯಾ ಚಿಣ್ಣಪ್ಪ ಕಲಾವಿದರೂ ಹೌದು. ಜಭ್ಭೂಮಿ ಸಿ.ಡಿ.ಯಲ್ಲಿ ಅವರು ಎರಡು ಕೊಡವ ಭಾಷೆ ಹಾಡುಗಳನ್ನಾಡಿದ್ದು ನಾಪೋಕ್ಲು ಕೊಡವ ಸಮಾಜದ ಆಡಳಿತ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. - ದುಗ್ಗಳ