ಶಿಮ್ಲಾ, ಮೇ 13: ರಸ್ತೆಯಿಂದ ಬಸ್ ಉರುಳಿ ಬಿದ್ದ ಪರಿಣಾಮ ಸುಮಾರು 7 ಮಂದಿ ಸಾವನ್ನಪ್ಪಿ 12 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಸರ್ಮೌರ್‍ನಲ್ಲಿ ನಡೆದಿದೆ. ಮಾನ್ವಾಯಿಂದ ಸೋಲಾನ್‍ಗೆ ತೆರಳುತ್ತಿದ್ದ ಖಾಸಗಿ ಬಸ್ ರಾಜಗರ್ ಪಟ್ಟಣದಿಂದ 25 ಕಿ.ಮೀ. ದೂರು ಇರುವ ನೈನೇತಿ ಪಂಚಾಯಿತಿ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಗಾಯಗೊಂಡವರನ್ನು ಸೋಲಾನ್ ಪ್ರಾದೇಶಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು ಅಪಘಾತಕ್ಕೆ ಕಾರಣ ಏನು ಎಂಬದು ಇನ್ನೂ ತಿಳಿದು ಬಂದಿಲ್ಲ. ಸ್ಥಳೀಯ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಬರುವ ಮುನ್ನವೇ ಸ್ಥಳೀಯರು ಬಂದು ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದರು.ಕಾಪೆರ್Çೀರೇಟರ್‍ನ್ನು ಬಂಧಿಸಿ ಮೆರವಣಿಗೆ ದಾವಣಗೆರೆ, ಮೇ 13: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನದ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದ ದಾವಣಗೆರೆ ಕಾಂಗ್ರೆಸ್ ಕಾಪೆರ್Çೀರೇಟರ್ ಶ್ರೀನಿವಾಸ್ ಅಲಿಯಾಸ್ ಮೋಟ್ಬಾಳ್ ಸೀನನನ್ನು ಪೆÇಲೀಸರು ಬಂಧಿಸಿ ನಗರದಲ್ಲಿ ಮೆರವಣಿಗೆ ಮಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶನಿವಾರ ಮತದಾನ ನಡೆಯುತ್ತಿದ್ದ ವೇಳೆ ಸೀನ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಈ ಸಂಬಂಧ ಮಾಜಿ ಸಚಿವ, ಬಿಜೆಪಿ ನಾಯಕ ಎಸ್.ಎ. ರವೀಂದ್ರನಾಥ್ ಅವರು ಕೆಟಿಜೆ ನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೆÇಲೀಸರು ಭಾನುವಾರ ಸೀನನನ್ನು ಬಂಧಿಸಿ ಆತನ ಕೈ ಕಟ್ಟಿ, ಕತ್ತಿನ ಪಟ್ಟಿ ಹಿಡಿದು ರಸ್ತೆಯುದ್ದಕ್ಕೂ ಎಳೆದೊಯ್ದರು. ಇದನ್ನು ಸ್ಥಳೀಯರೊಬ್ಬರು ಮೊಬೈಲ್‍ನಲ್ಲಿ ಚಿತ್ರೀಕರಣ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‍ಲೋಡ್ ಮಾಡಿದ್ದಾರೆ.

ನೇಪಾಳ ಭೇಟಿ ಐತಿಹಾಸಿಕವೆಂದ ಪ್ರಧಾನಿ

ಕಠ್ಮಂಡು, ಮೇ 13: ನೇಪಾಳದ ಎರಡು ದಿನಗಳ ಭೇಟಿ ಐತಿಹಾಸಿಕವಾಗಿತ್ತು ಎಂದು ಪ್ರಧಾನಿ ನರೇಂದ್ರಮೋದಿ ಬಣ್ಣಿಸಿದ್ದಾರೆ. ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಅವರೊಂದಿಗಿನ ಮಾತುಕತೆ ಫಲಪ್ರದವಾಗಿತ್ತು. ತಮ್ಮ ಭೇಟಿಯಿಂದಾಗಿ ಭಾರತ-ನೇಪಾಳ ನಡುವಿನ ಒಪ್ಪಂದದಲ್ಲಿ ಹೊಸ ಹುಮ್ಮಸ್ಸು ಮೂಡಿದೆ ಎಂದಿದ್ದಾರೆ. 2014 ರ ನಂತರ ನೇಪಾಳಕ್ಕೆ ಮೂರನೇ ಬಾರಿ ಭೇಟಿಯಿಂದಾಗಿ ಅಲ್ಲಿನ ಅತ್ಯದ್ಬುತ ಜನರನ್ನು ಸಂಪರ್ಕಿಸಲು ಉತ್ತಮ ಅವಕಾಶ ಒದಗಿಸಿಕೊಟ್ಟಿತು ಎಂದು ನರೇಂದ್ರಮೋದಿ ಟ್ವೀಟರ್‍ನಲ್ಲಿ ತಿಳಿಸಿದ್ದಾರೆ. ನೇಪಾಳ ಪ್ರವಾಸದಿಂದಾಗಿ ಉಭಯ ದೇಶದಲ್ಲಿ ಬಾಂಧವ್ಯದಲ್ಲಿ ಮತ್ತಷ್ಟು ವೃದ್ಧಿಯಾಗಿದ್ದು, ನೇಪಾಳದ ಅಭಿವೃದ್ಧಿಗೆ ಅಗತ್ಯ ಬೆಂಬಲ ನೀಡುವದಾಗಿ ಪುನರುಚ್ಚರಿಸಿದ್ದಾರೆ. ಹಿಂದೆ ಮಾಡಿಕೊಂಡಿದ್ದ ಎಲ್ಲಾ ಒಪ್ಪಂದಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲು ಉಭಯ ದೇಶಗಳ ಮುಖಂಡರು ಒಪ್ಪಿರುವದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಭ್ಯರ್ಥಿ ಮುನಿರತ್ನಗೆ ಬಂಧನ ಭೀತಿ

ಬೆಂಗಳೂರು, ಮೇ 13: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಶಿ ರಾಶಿ ವೋಟರ್ ಐಡಿ ಪತ್ತೆಯಾದ ಹಿನ್ನೆಲೆ ಆರೋಪಿ ಪಟ್ಟಿಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಬಂಧನ ಭೀತಿ ಎದುರಿಸುತ್ತಿರುವ ಮುನಿರತ್ನ ಅವರು ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದೀಗ ಮುನಿರತ್ನ ಅವರು ತಲೆಮರೆಸಿಕೊಂಡಿದ್ದು ಯಾರಾ ಕರೆಗೆ ಸಿಗುತ್ತಿಲ್ಲ. ಮನೆಯಲ್ಲಿಯೂ ಇಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ ಬಂಧನ ಭೀತಿಯಲ್ಲಿರುವ ಮುನಿರತ್ನ ಅವರು ತೆರೆಮರೆಯಲ್ಲಿ ಜಾಮೀನಿಗಾಗಿ ಹೊಡಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮುನಿರತ್ನ ಸೇರಿ ಎಲ್ಲ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420, 468, 471ರಡಿ ಪ್ರಕರಣ ದಾಖಲಿಸುವಂತೆ ನಗರದ 24ನೇ ಎಸಿಎಂಎಂ ಕೋರ್ಟ್‍ನಲ್ಲಿ ಜಾಲಹಳ್ಳಿ ಪೆÇಲೀಸರಿಗೆ ಆದೇಶಿಸಿತ್ತು. ಗುರುತಿನ ಚೀಟಿಯನ್ನು ರೇಡ್ ಮಾಡಲು ಹೋಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮುನಿರತ್ನ ವಿರುದ್ಧ ಎಫ್‍ಐಆರ್ ದಾಖಲಿಸಲು ಸೂಚಿಸಲಾಗಿದೆ. ರಾಕೇಶ್ ಎಂಬವರು ಖಾಸಗಿ ದೂರು ಸಲ್ಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ರೈಲಿನಿಂದ ಬಾಲಕಿಯನ್ನು ರಕ್ಷಿಸಿದ ಯೋಧ

ಮುಂಬೈ, ಮೇ 13: ಮುಂಬೈನ ಮಹಾಲಕ್ಷ್ಮಿ ರೈಲ್ವೆ ನಿಲ್ದಾಣದಲ್ಲಿ ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಭಾರತೀಯ ಯೋಧನೊರ್ವ ರಕ್ಷಿಸಿದ್ದಾರೆ. ಬಾಲಕಿಯ ಪೆÇೀಷಕರು ಓಡಿ ಬಂದು ರೈಲನ್ನು ಏರಿದ್ದಾರೆ. ಈ ವೇಳೆ ಬಾಲಕಿ ಸಹ ರೈಲು ಹತ್ತಬೇಕು ಅಷ್ಟರಲ್ಲಿ ರೈಲು ಮುಂದಕ್ಕೆ ಚಲಿಸಿತ್ತು. ನಿಯಂತ್ರಣ ತಪ್ಪಿದ ಬಾಲಕಿ ಇನ್ನೇನು ರೈಲಿನಡಿ ಸಿಲುಕಬೇಕು ಅಷ್ಟರಲ್ಲೇ ಮಹಾರಾಷ್ಟ್ರದ ಭದ್ರತಾ ಪಡೆಯ ಯೋಧ ಸಚಿನ್ ಪೆÇೀಲ್ ಬಾಲಕಿಯನ್ನು ರಕ್ಷಿಸಿ ಸಾಹಸ ಮೆರೆದಿದ್ದಾರೆ. ಯೋಧ ಸಚಿನ್ ಪೆÇೀಲ್ ರಕ್ಷಿಸಿರುವ ವೀಡಿಯೋ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದೀಗ ವೀಡಿಯೋ ವೈರಲ್ ಆಗಿದೆ.

ಆತ್ಮಹತ್ಯಾ ಬಾಂಬರ್ ಧಾಳಿಗೆ 9 ಸಾವು

ಜಕಾರ್ತ, ಮೇ 13: ಇಂಡೊನೇಷ್ಯಾದ ಎರಡನೇ ಅತಿ ದೊಡ್ಡ ನಗರ ಸುರಭಯದಲ್ಲಿ ಇಂದು ಮುಂಜಾನೆ ಮೂರು ಚರ್ಚ್‍ಗಳ ಮೇಲೆ ಆತ್ಮಹತ್ಯಾ ಬಾಂಬರ್ ಧಾಳಿ ನಡೆಸಿದ್ದು, 9 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಸಂತ ಮೇರಿಯಾ ರೋಮನ್ ಕ್ಯಾಥೊಲಿಕ್ ಚರ್ಚ್‍ನಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ಮೊದಲ ಧಾಳಿ ನಡೆದಿದ್ದು, ಶಂಕಿತ ಬಾಂಬರ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಪೆÇಲೀಸ್ ಅಧಿಕಾರಿಗಳು ಸೇರಿದಂತೆ 40 ಮಂದಿ ಗಾಯಗೊಂಡಿರುವದಾಗಿ ಪೆÇಲೀಸ್ ವಕ್ತಾರ ಪ್ರಾನ್ಸ್ ಬರುಂಗ್ ಮಾಂಗೇರಾ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಇದಾದ ಒಂದು ನಿಮಿಷದ ನಂತರ ಡಿಪೆÇನಿಗೊರೊದ ಕ್ರಿಶ್ಟಿಯನ್ ಚರ್ಚ್ ನಲ್ಲಿ ಎರಡನೇ ಬಾಂಬ್ ಸ್ಫೋಟಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಪಂಟೆಕೊಸ್ತಾ ಚರ್ಚ್‍ನಲ್ಲಿ ಮೂರನೇ ಧಾಳಿ ನಡೆದಿದ್ದು, ಮತ್ತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಂಗೇರಾ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ

ದೆಹಲಿಯಲ್ಲಿ ದೂಳು ಬಿರುಗಾಳಿ

ನವದೆಹಲಿ, ಮೇ 13: ದೆಹಲಿಯಲ್ಲಿ ಭಾನುವಾರ ಸಂಜೆ ದೂಳು ಬಿರುಗಾಳಿಯೆದ್ದ ಬೆನ್ನಲ್ಲೇ ಭಾರೀ ಮಳೆ ಸುರಿದಿದ್ದು, ಮರಗಳು ಧರೆಗುರುಳಿವೆ. ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಉತ್ತರ ಭಾರತದಲ್ಲಿ ದೂಳು ಬಿರುಗಾಳಿಯ ಸಾಧ್ಯತೆ ಇದೆ ಎಂದು ನಿನ್ನೆಯೇ ಎಚ್ಚರಿಕೆ ನೀಡಲಾಗಿತ್ತು. ಇದೀಗ ಈ ಭಾಗದಲ್ಲಿ ಬಿರುಗಾಳಿಯ ವೇಗ ಗಂಟೆಗೆ 50 ಕಿ.ಮೀ.- 70 ಕಿ.ಮೀ. ಇದೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ. ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೀಗ ವಿಮಾನಯಾನವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಎಎನ್‍ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಕನಿಷ್ಟ 10 ವಿಮಾನಗಳನ್ನು ಬೇರೆ ದಾರಿಯಗಿ ಕಳುಹಿಸಲಾಗಿದೆ. ದೆಹಲಿ ಮೆಟ್ರೊ ಸೇವೆಗೂ ಅಡಚಣೆಯುಂಟಾಗಿದೆ. ಸಂಜೆ 5 ಗಂಟೆಯ ಹೊತ್ತಿಗೆ ಉರಿ ಬಿಸಿಲಿನ ಜತೆ ದೂಳು ಬಿರುಗಾಳಿಯೆದ್ದಿದೆ. ಇದರ ಬೆನ್ನಲ್ಲೇ ಭಾರೀ ಮಳೆಯಾಗಿದೆ.

ಉತ್ತರ ಭಾರತದಲ್ಲಿ 2 ದಿನ ಭಾರೀ ಮಳೆ

ನವದೆಹಲಿ, ಮೇ 13: ಮುಂದಿನ 48 ಗಂಟೆಗಳಲ್ಲಿ ಪರ್ವತ ರಾಜ್ಯಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ವೈಪರೀತ್ಯ ಪರಿಣಾಮ ಮುಂದಿನ ಎರಡು ದಿನಗಳಲ್ಲಿ ಉತ್ತರ ಭಾರತದಾದ್ಯಂತ ಮಳೆಯಾಗಲಿದೆ. ಉತ್ತರಾಖಂಡ್, ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಬಿದ್ದರೆ, ರಾಜಸ್ತಾನದಲ್ಲಿ ಧೂಳು ಬಿರುಗಾಳಿ ಕಾಣಿಸಿಕೊಳ್ಳಲಿದೆ. ಪಶ್ಚಿಮ ಭಾಗದಲ್ಲಿ ಗುಡುಗು ಮಿಂಚಿನ ವಾತಾವರಣದಿಂದ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.