ನಾಪೆÇೀಕ್ಲು, ಮೇ. 12: ನಾಪೆÇೀಕ್ಲು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೆÇಲೀಸ್ ಅರೆಸೇನಾ ಪಡೆ ಭದ್ರತೆಯೊಂದಿಗೆ ಎಲ್ಲಾ ಮತಗಟ್ಟೆಗಳಲ್ಲೂ ಶಾಂತಿಯುತ ಮತದಾನವಾದ ಬಗ್ಗೆ ವರದಿಯಾಗಿದೆ. ಅದರಂತೆ ಯವಕಪಾಡಿ ಗ್ರಾಮದ ಅಡಿಯರ ಕಾಲೋನಿ ನಿವಾಸಿಗಳು ರಸ್ತೆ ನಿರ್ಮಿಸಿಕೊಡಲಿಲ್ಲ ಎಂಬ ಕಾರಣಕ್ಕಾಗಿ ಮತದಾನ ಬಹಿಷ್ಕರಿಸಿರುವ ಘಟನೆ ನಡೆದಿದೆ.

ಯವಕಪಾಡಿ ಗ್ರಾಮದ ಕಬ್ಬಿಣಕಾಡು ತಾಮರ ರೆಸಾರ್ಟ್ ಮೇಲ್ಬಾಗದಲ್ಲಿ ವಾಸಿಸುತ್ತಿರುವ ಅಡಿಯ ಜನಾಂಗದವರು ತಮಗೆ ತಾಮರ ರೆಸಾರ್ಟ್ ಒಳಗಡೆ ರಸ್ತೆ ನಿರ್ಮಿಸಿಕೊಡಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಆದರೆ ಕಾರಣಾಂತರದಿಂದ ಇಲ್ಲಿಯವರೆಗೆ ಅವರಿಗೆ ರಸ್ತೆ ನಿರ್ಮಿಸಿಕೊಡಲು ಸಾಧ್ಯವಾಗಲಿಲ್ಲ. ಅದಕ್ಕೆ ಆಕ್ರೋಶಗೊಂಡ ಅಡಿಯ ಕಾಲೋನಿ ನಿವಾಸಿಗಳು ಜನಾಂಗದ ಮುಖಂಡ ಅಡಿಯರ ಚಾತಾ ನೇತೃತ್ವದಲ್ಲಿ ಚುನಾವಣೆ ಬಹಿಷ್ಕರಿಸುವದಾಗಿ ತಿಳಿಸಿದ್ದರು. ಅಪರಾಹ್ನ ಸ್ಥಳಕ್ಕಾಗಮಿಸಿದ ಚುನಾವಣಾ ಸೆಕ್ಟರ್ ಅಧಿಕಾರಿ ಲಕ್ಷ್ಮೀ ಕಾಂತ್ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗುವದು ಎಂಬ ಭರವಸೆಯ ಹಿನ್ನಲೆಯಲ್ಲಿ ಚುನಾವಣೆ ಬಹಿಷ್ಕರಿಸಿದ ಸುಮಾರು 40 ಮತದಾರರು ಯವಕಪಾಡಿ, ನಾಲ್ಕುನಾಡು ಅರಮನೆಯ ಬಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮತದಾನ ಮಾಡುವದರ ಮೂಲಕ ಸಮಸ್ಯೆ ಪರಿಹಾರಗೊಂಡಿತು.

ನಕ್ಷಲ್ ಬೆದರಿಕೆಯಿರುವ ನಾಲಡಿ, ನೆಲಜಿ - ಪೇರೂರು, ಚೇಲಾವರ ಮತಗಟ್ಟೆಗಳಲ್ಲಿ ಅತೀ ಹೆಚ್ಚಿನ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಇನ್ನುಳಿದಂತೆ ಸೂಕ್ಷ್ಮ ಪ್ರದೇಶಗಳಾದ ನಾಪೆÇೀಕ್ಲುವಿನ ಎರಡು ಮತಗಟ್ಟೆಗಳು, ಎಮ್ಮೆಮಾಡು ಮತ್ತು ಕಕ್ಕಬ್ಬೆ ಮತಗಟ್ಟೆಗಳಲ್ಲೂ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಉತ್ಸಾಹದ ಮತ ಚಾಲನೆ: ಕಳೆದ ಎರಡು ದಿನಗಳಿಂದ ಅಪರಾಹ್ನ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ಮತದಾರರು ಬೆಳಿಗ್ಗೆಯೇ ಮತದಾನಕ್ಕಾಗಿ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿರುವ ದೃಶ್ಯ ಕಂಡು ಬಂತು. ರೋಗಿಗಳಿಗೆ ಮತ್ತು ಅಂಗ ವಿಕಲರಿಗಾಗಿ ಎಲ್ಲಾ ಮತಗಟ್ಟೆಗಳಲ್ಲೂ ಗಾಲಿ ಕುರ್ಚಿಯನ್ನು ಇರಿಸಲಾಗಿತ್ತು. ಉಳಿದಂತೆ ಯಾವದೇ ಅಹಿತಕರ ಘಟನೆ ವರದಿಯಾದ ಬಗ್ಗೆ ತಿಳಿದು ಬಂದಿಲ್ಲ.

*ಗೋಣಿಕೊಪ್ಪಲು, ಮೇ 12 : ದ. ಕೊಡಗಿನ ಬಹುತೇಕ ಭಾಗಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಗೋಣಿಕೊಪ್ಪಲು, ಪೆÇನ್ನಂಪೇಟೆ, ತಿತಿಮತಿ, ದೇವರಪುರ, ಮಾಯಮುಡಿ, ಬಾಳೆಲೆ, ಕಾನೂರು, ಹುದಿಕೇರಿ, ಶ್ರೀಮಂಗಲ ಭಾಗಗಳಲ್ಲಿ ಬೆಳಗಿ ನಿಂದಲೇ ಮತಕಟ್ಟೆಗಳಲ್ಲಿ ಸಾಲು ಸಾಲಾಗಿ ನಿಂತು ಮತದಾನ ಮಾಡಿ ದರು. ತಿತಿಮತಿ, ಗೋಣಿಕೊಪ್ಪಲು ಮತಗÀಟ್ಟೆಯಲ್ಲಿ ಮತಯಂತ್ರ ಕೆಟ್ಟು ನಿಂತು ಒಂದು ಗಂಟೆಗಳ ಕಾಲ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಕೆಲಸ ತೆರಳುವವರು ಬೆಳಗಿನ ಜಾವವೇ ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿ ಮತಯಂತ್ರ ಕೆಟ್ಟಿರುವದರಿಂದ ಮತ ಹಾಕಲು ಕಾಯುವ ಸ್ಥಿತಿ ನಿರ್ಮಾಣವಾಯಿತು. ತಿತಿಮತಿಯ 196, ಗೋಣಿಕೊಪ್ಪಲು 177, ಶ್ರೀಮಂಗಲದ ನೆಮ್ಮಲೆ ಗ್ರಾಮದ 245 ಮತಗಟ್ಟೆಯಲ್ಲಿ ಒಂದು ಗಂಟೆಗಳ ಕಾಲ ಮತದಾನ ಕಾರ್ಯ ನಡೆಯಿತು. ಚುನಾವಣಾ ಅಧಿಕಾರಿಗಳು ಕೈಕೊಟ್ಟ ಮತಯಂತ್ರಗಳನ್ನು ಪರಿಶೀಲನೆ ನಡೆಸಿ ದೋಷ ಕಂಡ ಮತ ಯಂತ್ರಗಳನ್ನು ಬದಲಾಯಿಸಿ ನೂತನ ಮತಯಂತ್ರಗಳನ್ನು ಅಳವಡಿಸಿ ಮತದಾನ ಮಾಡಲು ಅನುಕೂಲ ಕಲ್ಪಿಸಿದರು.

ಬೆಳಗಿನಿಂದ ಮಧ್ಯಾಹ್ನದ ತನಕ ಶೀಘ್ರಗತಿಯಲ್ಲಿ ಮತದಾನ ಪ್ರಕ್ರೀಯೆ ಪ್ರಾರಂಭವಾಯಿತಾದರೂ ಮಧ್ಯಾಹ್ನದ ನಂತರ ಬಿಸಿಲಿನ ಬೇಗೆ ಮತ್ತು ಮಳೆಯ ಮೋಡದ ವಾತಾವರಣ ಮತ್ತು ಕೆಲವೆಡೆ ಮಳೆ ಹನಿ ಬಿದ್ದ ಹಿನ್ನೆಲೆ ಮಂದಗತಿಯಲ್ಲಿ ಮತದಾನ ನಡೆಯಿತು. ಮೇ ತಿಂಗಳಾದರಿಂದ ಶಾಲಾ ಕಾಲೇಜುಗಳಿಗೆ ರಜೆ ಇದ್ದ ಕಾರಣ ಬಹಳಷ್ಟು ಮತದಾರರು ಪ್ರವಾಸ ಹಾಗೂ ಊರುಗಳಿಗೆ ತೆರಳಿದ್ದರಿಂದ ಬಹಳಷ್ಟು ಗ್ರಾಮಗಳಲ್ಲಿ ಮತದಾನ ಕುಂಠಿತಗೊಳ್ಳಲು ಕಾರಣವಾಯಿತು. ಬಹುತೇಕ ಮತಗಟ್ಟೆಗಳಲ್ಲಿ ಬಿ.ಜೆ.ಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಹುರುಪಿನಿಂದ ಕಾರ್ಯನಿರ್ವ ಹಿಸುತ್ತಿದ್ದರೆ, ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತಾ ದಳದ ಕಾರ್ಯಕರ್ತರು ಯಾವದೇ ಬೂತ್‍ನಲ್ಲಿ ಕಾರ್ಯನಿರ್ವಹಿಸುವದು ಕಂಡುಬಂದಿಲ್ಲ. ತಿತಿಮತಿ ಭಾಗದ ಹಾಡಿ ನಿವಾಸಿಗಳು ಹೆಚ್ಚಾಗಿ ಮತದಾನ ಮಾಡಲು ಭಾಗವಹಿಸಿರು ವದು ಕಂಡುಬಂತು. ಉಳಿದಂತೆ ವಯಸ್ಕರು, ದಿವ್ಯ ಚೇತನರು ಸಹ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.

18 ತುಂಬಿದ ಯುವಕ, ಯುವತಿಯರು ಇದೇ ಮೊದಲ ಬಾರಿಗೆ ಮತದಾನ ಮಾಡುವ ಮೂಲಕ ಸಂಭ್ರಮ ಪಟ್ಟರು.

ಅವ್ಯವಸ್ಥೆ: ಬಹಳಷ್ಟು ಮತಗಟ್ಟೆಗಳಲ್ಲಿ ಮತದಾರರು ಗುರುತಿನ ಚೀಟಿಯನ್ನು ಹೊಂದಿದ್ದರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದೇ ಇರುವದರಿಂದ ಮತ ಹಾಕಲು ಸಾಧ್ಯವಾಗಲಿಲ್ಲ. ಅಧಿಕಾರಿ ಗಳ ನಿರ್ಲಕ್ಷ್ಯ ಎಂದು ಮತದಾರರು ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣೆ ಪ್ರಾರಂಭಕ್ಕೂ ಮುನ್ನ ಮಿಂಚಿನ ನೋಂದಾವಣೆ ಎಂಬ ಹೆಸರಿನಡಿಯಲ್ಲಿ ಹೊಸ ಮತ ದಾರರನ್ನು ಪಟ್ಟಿ ಸೇರಿಸುವ ಕಾರ್ಯ ನಡೆಸಲಾಯಿತು. ಆದರೆ ಸುಮಾರು 700ಕ್ಕೂ ಹೆಚ್ಚು ಮಂದಿಯನ್ನು ಪೆÇನ್ನಂಪೇಟೆ ವ್ಯಾಪ್ತಿಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಮಿಂಚಿನ ನೋಂದಾವಣೆ ಕಾರ್ಯ ನಡೆದರಾದರೂ ನೋಂದಾವಣಿ ಗೊಂಡ ಮತದಾರರಿಗೆ ಮತದಾನ ಮಾಡುವ ಹಕ್ಕು ದೊರೆಯದೆ ನಿರಾಶೆಗೆ ಒಳಗಾಗಬೇಕಾಯಿತು. ಈ ಅವ್ಯವಸ್ಥೆಗೆ ತಹಶೀಲ್ದಾರ್ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿ ದರು. ಬಿ.ಜೆ.ಪಿ. ಅಭ್ಯರ್ಥಿ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಮಾತನಾಡಿ ಶಾಸಕ ಕೆ.ಜಿ. ಬೋಪಯ್ಯ ಪ್ರತಿ ಮತಗಟ್ಟೆಯಲ್ಲೂ ಮತದಾರರು ಬಿ.ಜೆ.ಪಿಯನ್ನು ಒಲವಿನಿಂದ ಅಪ್ಪಿಕೊಂಡಿದ್ದಾರೆ. ಜಯ ನಮ್ಮದೆ ಎಂಬ ಭರವಸೆ ಇದೆ ಎಂದು ಹೇಳಿದರು.