ಮಡಿಕೇರಿ, ಮೇ 11: ವೀರಾಜಪೇಟೆ ಶಿವಕೇರಿಯ ಶ್ರೀ ಮಾರಿಯಮ್ಮ ಸೇವಾ ಸಮಿತಿಯ ವಾರ್ಷಿಕ ಮಹೋತ್ಸವ ತಾ. 22 ರಿಂದ 25 ರವರೆಗೆ ಜರುಗಲಿದೆ.

ತಾ. 22 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, 8.30 ಕ್ಕೆ ಕಲಶ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಹಾಗೂ ಮಂಗಳಾರತಿ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ನಂತರ 2 ಗಂಟೆಗೆ ದೇವರ ಪಲ್ಲಕ್ಕಿಯನ್ನು ಅಲಂಕೃತ ಮಂಟಪದೊಂದಿಗೆ ವೀರಾಜಪೇಟೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವದು. ರಾತ್ರಿ 9 ಗಂಟೆಗೆ ತಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ, 10 ಗಂಟೆಗೆ ಆರತಿ ಪೂಜಾ ಕಾರ್ಯಕ್ರಮ, ಮಹಾಪೂಜೆ ಜರುಗಲಿದೆ.

ತಾ. 23 ರಂದು ಬೆಳಿಗ್ಗೆ 10 ಗಂಟೆಗೆ ಪೂಜೆ, ಮಧ್ಯಾಹ್ನ 12 ಗಂಟೆಗೆ ನೈವೇದ್ಯ ಪೂಜೆ ಹಾಗೂ ಮಧ್ಯಾಹ್ನ 1 ಗಂಟೆಗೆ ಅನ್ನದಾನ ನಡೆಯಲಿದೆ. ತಾ. 25 ರಂದು ಬೆಳಿಗ್ಗೆ 10 ಗಂಟೆಗೆ ಪೂಜೆ ಆರಂಭಗೊಳ್ಳಲಿದ್ದು, ಮಧ್ಯಾಹ್ನ 2 ಗಂಟೆಗೆ ಮಹಾಪೂಜೆ ನೆರವೇರಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.