ಕುಶಾಲನಗರ, ಮೇ 11: ಇಲ್ಲಿನ ಸÀರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2018-19ನೇ ಸಾಲಿನ ಪ್ರಥಮ ಪದವಿ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಬಿ.ಎ (ಹೆಚ್.ಇ.ಪಿ) (ಹೆಚ್.ಇ.ಎಸ್) (ಹೆಚ್.ಇ.ಕೆ) ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ ಹಾಗೂ ಎಂ.ಎ (ಸಮಾಜಶಾಸ್ತ್ರ) ಕೋರ್ಸುಗಳು ಲಭ್ಯವಿದೆ. ಮಹಿಳಾ ವಸತಿ ನಿಲಯ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಪಾಠ ಶುಲ್ಕದಿಂದ ವಿನಾಯಿತಿ ಇರುತ್ತದೆ.

ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟಿದ್ದು 2(ಎಫ್) 12(ಬಿ) ಮಾನ್ಯತೆ ಪಡೆದಿದೆ. ಅಲ್ಲದೆ ವೈಫೈ ಆಧಾರಿತ ಬೋಧನೆ, ಐ.ಸಿ.ಟಿ ತರಗತಿಗಳು, ಸುಸಜ್ಜಿತವಾದ ಗಣಕೀಕೃತ, ಅಧುನಿಕರಣಗೊಂಡ ಗ್ರಂಥಾಲಯ, ಡಿ.ಸಿ.ಎ. ಮತ್ತು ಯು.ಜಿ.ಸಿ.ಯಿಂದ ಆಯ್ಕೆಗೊಂಡಿರುವ ನುರಿತ ಪ್ರಾಧ್ಯಾಪಕರುಗಳಿಂದ ಬೋಧನೆ, ಜ್ಞಾನ ಸಂಗಮ ಆಧಾರಿತ ಕಲಿಕೆ ಮಟ್ಟ, ಮಲ್ಟಿಜಿಮ್ ವ್ಯವಸ್ಥೆಯೊಂದಿಗೆ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದ್ದು, ಉತ್ತಮ ರೀತಿಯ ಫಲಿತಾಂಶ ನೀಡುತ್ತಾ ಬಂದಿದೆ. ಹೆಚ್ಚಿನ ಮಾಹಿತಿಗೆ ತಿತಿತಿ.gಜಿgಛಿ.ಞಚಿಡಿ.ಟಿiಛಿ.iಟಿ/ಞushಚಿಟಚಿಟಿಚಿgಚಿಡಿ <hಣಣಠಿ://ತಿತಿತಿ.gಜಿgಛಿ.ಞಚಿಡಿ.ಟಿiಛಿ.iಟಿ/ಞushಚಿಟಚಿಟಿಚಿgಚಿಡಿ>. ಕಚೇರಿ ದೂರವಾಣಿ ಸಂಖ್ಯೆ: 08276-274474, 9845957137, 9481057943 ಸಂಪರ್ಕಿಸಬಹುದು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.