ಮಡಿಕೇರಿ, ಮೇ 11: ಕೊಡವ ಕುಟುಂಬಗಳ ನಡುವೆ ಇಲ್ಲಿನ ಫೀ.ಮಾ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಡ್ಲಂಡ ಕ್ರಿಕೆಟ್ ಕಪ್ ಉತ್ಸವದಲ್ಲಿ 9 ತಂಡಗಳು ಮುನ್ನಡೆ ಸಾಧಿಸಿವೆ.ಇಂದು ನಡೆದ ಪಂದ್ಯಾವಳಿಯಲ್ಲಿ ಮುಕ್ಕಾಟಿರ (ದೊಡ್ಡಪುಲಿಕೋಟು) 4 ಓವರ್‍ನಲ್ಲಿ 2 ವಿಕೆಟ್‍ಗೆ 56 ರನ್ ಗಳಿಸಿದರೆ, ನಾಟೋಳನ ತಂಡ 4 ವಿಕೆಟ್‍ಗೆ 22 ರನ್ ಗಳಿಸಿ 34 ರನ್‍ಗಳ ಅಂತರದಿಂದ ಸೋಲನುಭವಿಸಿತು. ಮುಕ್ಕಾಟಿರ ಪೊನ್ನಣ್ಣ 22 ರನ್ ಗಳಿಸಿ ಗಮನ ಸೆಳೆದರು. ನಾಟೋಳನ ಹರೀಶ್ ಪಂದ್ಯಪುರುಷ ಪ್ರಶಸ್ತಿ ಪಡೆದರು. ಅಮ್ಮಣಿಚಂಡ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿದರೆ, ಮಾಪಣಮಾಡ ತಂಡ 3 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಮಾಪಣಮಾಡ ಪೊನ್ನಣ್ಣ 43 ರನ್ ಗಳಿಸಿದರು. ಅಮ್ಮಣಿಚಂಡ ಮಂಥನ್ ಪಂದ್ಯಪುರುಷ ಪ್ರಶಸ್ತಿ ಪಡೆದರು.

ಬಲ್ಲಿಮಾಡ ತಂಡ 3 ವಿಕೆಟ್‍ಗೆ 48 ರನ್ ಗಳಿಸಿದರೆ, ಬಲ್ಯಮೀದೇರಿರ ತಂಡ 3 ವಿಕೆಟ್ ಕಳೆದುಕೊಂಡು 32 ರನ್ ಗಳಿಸಿ 16 ರನ್‍ಗಳ ಅಂತರದಿಂದ ಸೋಲನುಭವಿಸಿತು. ಬಲ್ಯಮೀದೇರಿರ ಚೇತನ್ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದರು.

ಕೊಪ್ಪಿರ ತಂಡ 2 ವಿಕೆಟ್‍ಗೆ 57 ರನ್ ಗಳಿಸಿದರೆ, ಬಿದ್ದಾಟಂಡ ತಂಡ 4 ವಿಕೆಟ್‍ಗೆ 49 ರನ್ ಗಳಿಸಿ, 8 ವಿಕೆಟ್‍ಗಳ ಅಂತರದಿಂದ ಸೋಲನುಭವಿಸಿತು. ಪೂಳಂಡ ತಂಡ 3 ವಿಕೆಟ್‍ಗೆ 57 ರನ್ ಗಳಿಸಿದರೆ, ಮೂಕಳೇರ ತಂಡ 5 ವಿಕೆಟ್‍ಗೆ 21 ರನ್ ಗಳಿಸಿ, 36 ರನ್‍ಗಳ ಅಂತರದಿಂದ ಸೋಲನುಭವಿಸಿತು. ಮೂಕಳೇರ ನಿಖಿಲ್ ನಾಚಪ್ಪ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಅಲ್ಲಚಂಡ ತಂಡ 2 ವಿಕೆಟ್‍ಗೆ 61 ರನ್ ಗಳಿಸಿದರೆ, ಮಲ್ಚಿರ ತಂಡ 5 ವಿಕೆಟ್‍ಗೆ 45 ರನ್ ಗಳಿಸಿ 16 ರನ್‍ಗಳ ಅಂತರದಿಂದ ಸೋಲನುಭವಿಸಿತು. ಮಲ್ಚಿರ ಶಾನ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಮಂಡುವಂಡ ತಂಡ 1 ವಿಕೆಟ್‍ಗೆ 54 ರನ್ ಗಳಿಸಿದರೆ, ಬೊಜ್ಜಂಗಡ ತಂಡ 5 ವಿಕೆಟ್‍ಗೆ 19 ರನ್ ಮಾತ್ರ ಗಳಿಸಿ 35 ರನ್‍ಗಳ ಅಂತರದಿಂದ ಸೋಲನುಭವಿಸಿತು. ಬೊಜ್ಜಂಗಡ ಸೋಮಣ್ಣ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಕಲ್ಲೇಂಗಡ ತಂಡ 4 ವಿಕೆಟ್‍ಗೆ 24 ರನ್ ಗಳಿಸಿದರೆ, ಕಡೇಮಾಡ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ಕಲ್ಲೇಂಗಡ ಚೇತನ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.