ನಾಪೆÇೀಕ್ಲು, ಮೇ 11: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಇಪ್ಪತ್ತಾರನೇ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್ ಕಲಿಯಂಡ ತಂಡವು ಪರದಂಡ ತಂಡದ ವಿರುದ್ಧ ಸೋಲನ್ನು ಅನುಭವಿಸಿತು.

ಶುಕ್ರವಾರ ನಡೆದ ಪಂದ್ಯಾಟದಲ್ಲಿ ಪರದಂಡ, ಬೊವ್ವೇರಿಯಂಡ, ಮುಕ್ಕಾಟಿರ (ಬೋಂದ), ಮಾಚಂಡ, ಅಂಜಪರವಂಡ, ಕಡೇಮಾಡ, ಕೊಂಗಂಡ, ಕಂಬೀರಂಡ, ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಕಳೆದ ಬಾರಿ ಬಿದ್ದಾಟಂಡ ಕಪ್ ರನ್ನರ್ಸ್ ಪ್ರಶಸ್ತಿ ಪಡೆದ ಪರದಂಡ ಮತ್ತು ಮೂರು ಬಾರಿ ಕೊಡವ ಹಾಕಿ ನಮ್ಮೆಯ ಪ್ರಶಸ್ತಿ ಪಡೆದ ಕಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಪರದಂಡ ತಂಡವು ಕಲಿಯಂಡ ತಂಡವನ್ನು 2-0 ಗೋಲಿನಿಂದ ಮಣಿಸಿತು. ಪರದಂಡ ತಂಡದ ಪರ ಕವನ್ ಬೋಪಣ್ಣ ಎರಡು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಬೊವ್ವೇರಿಯಂಡ ಮತ್ತು ಪಟ್ಟಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೊವ್ವೇರಿಯಂಡ ತಂಡವು ಪಟ್ಟಡ ತಂಡವನ್ನು 2-1 ಗೋಲಿನ ಅಂತರದಿಂದ ಸೋಲಿಸಿತು. ಬೊವ್ವೇರಿಯಂಡ ತಂಡದ ಪರ ಸಚಿನ್ ಮುತ್ತಣ್ಣ, ಜೀತನ್ ಕಾಳಪ್ಪ ತಲಾ ಒಂದೊಂದು ಗೋಲು ದಾಖಲಿಸಿದರೆ, ಪಟ್ಟಡ ತಂಡದ ಪರ ಶರತ್ ಒಂದು ಗೋಲು ದಾಖಲಿಸಿದರು. ಕಾಂಡಂಡ ಮತ್ತು ಮುಕ್ಕಾಟಿರ (ಬೋಂದ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಕಾಂಡಂಡ ತಂಡವನ್ನು 1-0 ಗೋಲಿನಿಂದ ಪರಾಭವಗೊಳಿಸಿತು. ಮುಕ್ಕಾಟಿರ ತಂಡದ ಪರ ಬಿದ್ದಪ್ಪ ಒಂದು ಗೋಲು ದಾಖಲಿಸಿದರು. ಮಾಚಂಡ ಮತ್ತು ಕರ್ತಮಾಡ (ಬಿರುನಾಣಿ) ತಂಡಗಳ ನಡುವಿನ ಪಂದ್ಯದಲ್ಲಿ ಮಾಚಂಡ ತಂಡವು ಕರ್ತಮಾಡ ತಂಡವನ್ನು 1-0 ಗೋಲಿನಿಂದ ಮಣಿಸಿತು. ಮಾಚಂಡ ತಂಡದ ಪರ ಪ್ರಿನ್ಸ್ ಒಂದು ಗೋಲು ದಾಖಲಿಸಿ ತಂಡವನ್ನು ಮುನ್ನಡೆಸಿದರು. ಬೇಪಡಿಯಂಡ ತಂಡದ ಗೈರು ಹಾಜರಿನಿಂದ ಅಂಜಪರವಂಡ ತಂಡವು ಮುನ್ನಡೆ ಸಾಧಿಸಿತು. ಮೂಕೋಂಡ ಮತ್ತು ಕಡೇಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕಡೇಮಾಡ ತಂಡವು ಮೂಕೋಂಡ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ಕಡೇಮಾಡ ತಂಡದ ಪರ ಪವನ್ ಬೋಪಣ್ಣ ಒಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಚೋಕಿರ ಮತ್ತು ಕೊಂಗಂಡ ತಂಡಗಳ ನಡುವಿನ ಸೆಣೆಸಾಟದಲ್ಲಿ ಕೊಂಗಂಡ ತಂಡವು ಚೋಕಿರ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ಕೊಂಗಂಡ ತಂಡದ ಪರ ಪೂವಣ್ಣ ಎರಡು ಗೋಲು ದಾಖಲಿಸಿದರೆ, ಚೋಕಿರ ತಂಡದ ಪರ ಅಕ್ಷಿತ್ ಒಂದು ಗೋಲು ದಾಖಲಿಸಿದರು. ಕೊಂಡಿರ ಮತ್ತು ಕಂಬೀರಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಂಬೀರಂಡ ತಂಡವು ಕೊಂಡಿರ ತಂಡವನ್ನು 2-0 ಗೋಲಿನ ಅಂತರದಿಂದ ಮಣಿಸಿತು. ಕಂಬೀರಂಡ ತಂಡದ ಪರ ಮಹೀಮ್ ಮೊಣ್ಣಪ್ಪ, ರಾಯ್ ಜಗದೀಶ್ ತಲಾ ಒಂದೊಂದು ಗೋಲು ದಾಖಲಿಸಿದರು.