ಕರಿಕೆ, ಮೇ 5: ಇಲ್ಲಿಗೆ ಸಮೀಪದ ಹದಿಮೂರನೇ ಮೈಲು ಎಂಬಲ್ಲಿ ಕಾರೊಂದು ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ.ಭಾಗಮಂಡಲ-ಕರಿಕೆ ರಸ್ತೆಯ ‘ಎಸ್’ ತಿರುವಿನಲ್ಲಿ ಎಮ್ಮೆಮಾಡು ಯಾತ್ರೆ ಮುಗಿಸಿ ತೆರಳುತ್ತಿದ್ದ ಕೇರಳ ಮೂಲದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು ಹತ್ತು ಅಡಿ ಆಳಕ್ಕೆ ಉರುಳಿಬಿದ್ದಿದೆ. ತಡರಾತ್ರಿ ಅದೇ ರಸ್ತೆಯಲ್ಲಿ ಬರುತ್ತಿದ್ದ ಕರಿಕೆ ಮೂಲದ ಚೇರಂಬಾಣೆಯಲ್ಲಿ ಮೆಕಾನಿಕ್ ವೃತ್ತಿಯಲ್ಲಿರುವ ದುರ್ಗದಾಸ ಎಂಬವರು ಕೂಡಲೇ ಅವಘಡಕ್ಕೀಡಾಗಿದ್ದ ಕಾರಿನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯರು, ಮಕ್ಕಳು ಸೇರಿದಂತೆ ಏಳು ಮಂದಿ ಪ್ರಯಾಣಿಕರನ್ನು ಅವಘಡಕ್ಕೀಡಾದ ಕಾರಿನ ಗಾಜನ್ನು ಒಡೆದು ರಕ್ಷಿಸಿ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದು ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.