ಸೋಮವಾರಪೇಟೆ,ಏ.12: ಇಲ್ಲಿನ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ದಿ. ವಿಠಲಾಚಾರ್ಯ ಸ್ಮಾರಕ 4ನೇ ವರ್ಷದ ಪ್ರತಿಷ್ಠಿತ ಹಾಕಿ ಪಂದ್ಯಾಟ ತಾ. 13 ರಿಂದ(ಇಂದಿನಿಂದ) ತಾ. 15ರವರೆಗೆ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ತಾ. 13ರಂದು ಬೆಳಿಗ್ಗೆ 9 ಗಂಟೆಗೆ ಪಂದ್ಯಾಟದ ಉದ್ಘಾಟನೆಯನ್ನು ಉದ್ದಿಮೆದಾರ ವೇಣು ಬಿಳಿಮಗ್ಗ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಬಿ.ಎಸ್. ಸುಂದರ್, ಹರಪಳ್ಳಿ ರವೀಂದ್ರ, ಅರುಣ್‍ಕುಮಾರ್ ಕೊತ್ನಳ್ಳಿ, ಯೂನಿಸ್, ಕಾಫಿ ಬೆಳೆಗಾರ ಬಿ.ಎಂ. ಸುರೇಶ್ ಅವರುಗಳು ಪಾಲ್ಗೊಳ್ಳಲಿದ್ದಾರೆ.

ತಾ. 15ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಂತರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ. ಸುನಿಲ್ ಅವರ ಪತ್ನಿ, ಪಂದ್ಯಾಟದ ಪ್ರಾಯೋಜಕರಾದ ನೀಶಾ ಸುನಿಲ್, ಹಾಕಿ ಕೊಡಗು ಅಧ್ಯಕ್ಷ ಕಾಳಯ್ಯ, ಹಾಕಿ ಕರ್ನಾಟಕ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ, ಎಸ್‍ಎಲ್‍ಎನ್ ಸಂಸ್ಥೆ ಮಾಲೀಕ ಸಾತಪ್ಪನ್, ಒಲಂಪಿಯನ್ ಅರ್ಜುನ್ ಹಾಲಪ್ಪ, ವಿ.ಆರ್. ರಘುನಾಥ್, ಅಂತರಾಷ್ಟ್ರೀಯ ಹಾಕಿ ಆಟಗಾರ ನಿಕಿನ್ ತಿಮ್ಮಯ್ಯ, ವಿಕ್ರಂಕಾಂತ್, ವಿ.ಎಸ್. ವಿನಯ್, ಹರಿಪ್ರಸಾದ್ ಮತ್ತು ಉದ್ಯಮಿ ಚಾಮೇರ ಪವನ್ ದೇವಯ್ಯ ಅವರುಗಳು ಭಾಗವಹಿಸಲಿದ್ದಾರೆ.

ಜಿಲ್ಲೆಯ ಪ್ರತಿಷ್ಠಿತ ಹಾಕಿ ತಂಡಗಳಾದ ವೀರಾಜಪೇಟೆ ಟವರ್ಸ್, ಹಾತೂರು ಸ್ಪೋಟ್ರ್ಸ್ ಕ್ಲಬ್, ಬ್ಲೂ ಸ್ಟಾರ್ ಪೊದುಮಾನಿ, ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ಸೋಮವಾರಪೇಟೆ, ಡ್ರಿಬಲ್ಸ್ ಸ್ಪೋಟ್ರ್ಸ್ ಕ್ಲಬ್, ಯು.ಎಸ್.ಸಿ. ಬೇರಳಿನಾಡು, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿವೆ.

ಪ್ರಥಮ ಬಹುಮಾನವಾಗಿ 50 ಸಾವಿರ ನಗದು ಮತ್ತು ಟ್ರೋಫಿ ಹಾಗೂ ದ್ವಿತೀಯ ಬಹುಮಾನವಾಗಿ 30 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವದು ಎಂದು ಕ್ಲಬ್‍ನ ಅಧ್ಯಕ್ಷ ಅಶೋಕ್ ತಿಳಿಸಿದ್ದಾರೆ.