ಕುಶಾಲನಗರ, ಏ. 12: ಕುಶಾಲನಗರ ವಲಯದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪಕ್ಷದ ಬಲವರ್ಧನೆ ಕಾರ್ಯಸೂಚಿ ಹಮ್ಮಿಕೊಳ್ಳಲಾಗುವದು ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಮಾರ್ಪಡುಗಳೊಂದಿಗೆ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಮರು ಅಸ್ತಿತ್ವಕ್ಕೆ ಬಂದಿದ್ದು ಪಕ್ಷದ ನಾಯಕರು, ಪ್ರಮುಖರು ಹಾಗೂ ಕಾರ್ಯಕರ್ತರು ಒಗ್ಗೂಡಿ ಒಂದೇ ತಂಡವಾಗಿ ಪಕ್ಷಕ್ಕಾಗಿ ದುಡಿಯುವ ವಾತಾವರಣ ನಿರ್ಮಾಣಗೊಳಿಸುವ ಬೃಹತ್ ಸವಾಲು ಇರುವದಾಗಿ ತಿಳಿಸಿದರು. ಪಕ್ಷದ ತತ್ವ ಸಿದ್ದಾಂತಗಳು, ಆದರ್ಶಗಳ ನೆಲೆಗಟ್ಟಿನಡಿ ಕಾರ್ಯನಿರ್ವಹಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರು ಕೈಜೋಡಿಸಬೇಕಿದೆ ಎಂದರು.
ತಾ. 14ರ ಡಾ. ಅಂಬೇಡ್ಕರ್ ಜಯಂತಿಯಂದು ಪಟ್ಟಣದ ಕನ್ನಿಕಾ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಲಿದ್ದು, ಕೆಪಿಸಿಸಿ ವೀಕ್ಷಕರು, ಜಿಲ್ಲಾ ವರಿಷ್ಠರು, ವಿವಿಧ ಘಟಕಗಳ ಪ್ರಮುಖರು, ಮತ್ತಿತರ ನಾಯಕರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಕುಡಾ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ಕುಶಾಲನಗರ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಆರ್.ಕೆ. ನಾಗೇಂದ್ರಬಾಬು, ನಗರ ಘಟಕದ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಫಜಲುಲ್ಲಾ, ಪ್ರಮೋದ್ ಮುತ್ತಪ್ಪ, ಮಾಜಿ ಸದಸ್ಯ ಅಬ್ದುಲ್ ಖಾದರ್, ಪ್ರಮುಖರಾದ ಕೃಷ್ಣೋಜಿರಾವ್, ದಯಾನಂದ ಇದ್ದರು.