ಮಡಿಕೇರಿ, ಏ. 11: ಕುಶಾಲನಗರ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಿ ರುವದರಿಂದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕೋರಿಕೆಯಂತೆ ತಾ. 12 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ 220 ಕೆ.ವಿ ಕುಶಾಲನಗರ, 33/11 ಕೆವಿ ಸೋಮವಾರಪೇಟೆ, 66/11 ಕೆವಿ ಸುಂಟಿಕೊಪ್ಪ ಹಾಗೂ 66/11 ಕೆವಿ ಮಡಿಕೇರಿ, ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು.

ಆದ್ದರಿಂದ ಕುಶಾಲನಗರ, ಕೂಡಿಗೆ, ನಂಜರಾಯಪಟ್ಟಣ, ಸುಂಟಿಕೊಪ್ಪ, ಚೆಟ್ಟಳ್ಳಿ, ಶಾಂತಳ್ಳಿ, ಕುಮಾರಹಳ್ಳಿ, ಗೌಡಳ್ಳಿ, ಹೆಗ್ಗಡಮನೆ, ಅಬ್ಬೂರುಕಟ್ಟೆ, ಐಗೂರು, ಮಡಿಕೇರಿ, ಮೇಕೇರಿ, ಕಡಗದಾಳು, ಭಾಗಮಂಡಲ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.