ಮಡಿಕೇರಿ, ಏ. 11: ಕೊಡವ ಮಕ್ಕಡ ಕೂಟ ಮತ್ತು ಕರವಲೆ ಬಾಡಗ ಗ್ರಾಮದ ಮಿನ್ನಂಡ ಕುಟುಂಬದ ಸಹಯೋಗದಲ್ಲಿ ತಾ 14 ರಂದು ಕರವಲೆ ಬಾಡಗ ಗ್ರಾಮದ ಮಿನ್ನಂಡ ಕುಟುಂಬದ ಮನೆಯಲ್ಲಿ ಪೂರ್ವಾಹ್ನ 8 ಗಂಟೆಗೆ ಕೊಡವ ಕ್ಯಾಲೆಂಡರಿನ ಮೊದಲ ದಿನವಾದ ಎಡಮ್ಯಾರ್ 1ನ್ನು ಜೋಡಿ ಎತ್ತು ಕಟ್ಟಿ ಉಳುವ ಮೂಲಕ ಆಚರಿಸಲಾಗುವದು ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಕಾರ್ಯದರ್ಶಿ ಪುತ್ತರಿರ ಕಾಳಯ್ಯ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9880778047, 8762515659 ಸಂಪರ್ಕಿಸಬಹುದಾಗಿದೆ.