ಮಡಿಕೇರಿ, ಏ. 9: ವೀರಾಜಪೇಟೆ ಶ್ರೀ ಕಾವೇರಿ ಆಶ್ರಮದಲ್ಲಿ ತಾ. 14 ರಂದು ಸದ್ಗುರು ಅಪ್ಪಯ್ಯ ಸ್ವಾಮಿ ಅವರ 133ನೇ ಜಯಂತಿಯೊಂದಿಗೆ ಬೆಳಿಗ್ಗೆ 7 ಗಂಟೆಯಿಂದ ಶ್ರೀ ಗುರು ಷೋಡಶೋಪಚಾರ ಪೂಜೆ, ಪ್ರಾತಃಕಾಲ 8-30 ರಿಂದ ಅಷ್ಟೋತ್ತರ, ಸಹಸ್ರ ನಾಮಪೂಜೆ Éಯೊಂದಿಗೆ 10-30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಆಶ್ರಮದ ಶ್ರೀವಿವೇಕಾನಂದ ಶರಣ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ಆದಿ ಚುಂಚನಗಿರಿ ಮಂಡ್ಯ ಶಾಖೆಯ ಶ್ರೀ

ಪುರುಷೋತ್ತಮಾನಂದನಾಥ ಸ್ವಾಮೀಜಿ ಹಾಗೂ ಬೆಂಗಳೂರು ಓಂಕಾರ ಆಶ್ರಮದ ಶ್ರೀ ಮಧುಸೂದನಾನಂದ ಪುರಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಅನ್ನಪ್ರಸಾದ ಏರ್ಪಡಿಸ ಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.