ಮಡಿಕೇರಿ, ಏ. 9 : ಕಡಿಯತ್ತೂರು ನಾಡು ಚೇಲಾವರ ಗ್ರಾಮದ ಪೊನ್ನೋಶಾಸ್ತಾವು ಹಾಗೂ ಪುಡಿಯೋದಿ ದೇವರ ಉತ್ಸವವು ಇದೇ ತಾ. 14 ರಿಂದ 18ರವರೆಗೆ ನಡೆಯಲಿದ್ದು, 14 ಮತ್ತು 15 ಶಾಸ್ತಾವು ಹಬ್ಬ 17 ಮತ್ತು 18 ರಂದು ಪುದಿಯೋದಿ ತೆರೆ ನಡೆಯಲಿದೆ ಎಂದು ಊರಿನ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.ಮಡಿಕೇರಿ, ಏ. 9 : ಸೂರ್ಲಬ್ಬಿ ನಾಡಿನ ಶ್ರೀ ಕಾಳತಮ್ಮೆ ಹಾಗೂ ಕ್ಷೇತ್ರಪಾಲ ದೇವರ ವಾರ್ಷಿಕ ಉತ್ಸವವು ತಾ. 10 ರಂದು ಪಟ್ಟಣಿ, ಭಂಡಾರ ತರುವದರೊಂದಿಗೆ ಆರಂಭವಾಗಲಿದೆ. ತಾ. 17 ರಂದು ವಾರ್ಷಿಕ ದೊಡ್ಡ ಹಬ್ಬ ಹಾಗೂ ಬೆಳಗಿನ ಜಾವ ಹರಕೆ ಕಾಣಿಕೆ ಮತ್ತು ತೆಂಗಿನಕಾಯಿ ಜಗ್ಗಾಟ ಇತ್ಯಾದಿ ಸೇವೆಗಳು ಜರುಗಲಿದೆ. ರಾತ್ರಿ ಕ್ಷೇತ್ರಪಾಲನಿಗೆ ಬಲಿಸೇವೆಯೊಂದಿಗೆ ತಾ. 18 ರಂದು ಭಂಡಾರ ಮರಳಿ ತಕ್ಕರ ಮನೆಗೆ ಕೊಂಡೊಯ್ಯಲಾಗುವದು ಎಂದು ತಕ್ಕ ಮುಖ್ಯಸ್ಥರು ತಿಳಿದಿದ್ದಾರೆ.