ಚೆಟ್ಟಳ್ಳಿ, ಏ.9: ಚೆಟ್ಟಳ್ಳಿ ಸಮೀಪದ ಪೊನ್ನತ್‍ಮೊಟ್ಟೆ ಎಂಬಲ್ಲಿ ಉನೈಸ್ ಎಂಬವರಿಗೆ ಸೇರಿದ ಆಟೋಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ.
ಉನೈಸ್ ತನ್ನ ಆಟೋವನ್ನು ಎಂದಿನಂತೆ ಮನೆಯ ಸಮೀಪ ನಿಲ್ಲಿಸಿದ್ದರು. ಬೆಳಿಗ್ಗಿನ ಜಾವ ಸುಮಾರು 2.30 ಗಂಟೆಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಉರಿಯುತ್ತಿದ್ದ ಶಬ್ಧ ಕೇಳಿ ಸುತ್ತಲಿನವರು ಎಚ್ಚರವಾಗುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆಟೋ ಅರ್ಧ ಭಾಗ ಸುಟ್ಟು ಹೋಗಿದೆ ಚೆಟ್ಟಳ್ಳಿ ಠಾಣೆಯ ಎಎಸ್‍ಐ ಪೂವಪ್ಪ, ಹೆಡ್‍ಕಾನ್‍ಸ್ಟೇಬಲ್ ಪ್ರಕಾಶ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ -ಕರುಣ್ ಕಾಳಯ್ಯ