ಚೆಟ್ಟಳ್ಳಿ, ಏ. 9 : ತಾ. 11 ರಿಂದ 14 ರವರೆಗೆ ತಲಕಾವೇರಿಯಲ್ಲಿ ಕ್ಷೇತ್ರದ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ಕೇರಳದ ಪಯ್ಯನೂರಿನ ಶ್ರೀ ಎ. ವಿ. ಮಾಧವ ಪೊದುವಾಳ್ ಮತ್ತು ತಂಡದವರಿಂದ ಅಷ್ಟಮಂಗಲ ಪ್ರಶ್ನೆಯನ್ನು ಏರ್ಪಡಿಸಲಾಗಿದ್ದು, ಕಾರಣಾಂತರÀದಿಂದ ಮೇ 21 ರಿಂದ ಮೇ 24 ರವರೆಗೆ ನಡೆಸಲಾಗುವ ದೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ. ಭಾಗಮಂಡಲದ ಭಗಂಡೇಶ್ವರ ಸನ್ನಿದಿಯಲ್ಲಿ ತಾ. 9ರಿಂದ ನಡೆಯುತ್ತಿರುವ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮವು ಎಂದಿನಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ.