ಸೋಮವಾರಪೇಟೆ, ಏ. 8: ತೋಳೂರುಶೆಟ್ಟಳ್ಳಿಯ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಂ.ಈ. ರಾಮಪ್ಪ ಅವರನ್ನು ಇಲಾಖೆಯ ಸಿಬ್ಬಂದಿಗಳು ಸನ್ಮಾನಿಸಿ, ಬೀಳ್ಕೊಟ್ಟರು.

ಪಟ್ಟಣದಲ್ಲಿರುವ ಅಂಚೆ ಉಪ ವಿಭಾಗದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದ ಅಧ್ಯಕ್ಷತೆಯನ್ನು ಉಪ ವಿಭಾಗದ ಅಂಚೆಪಾಲಕಿ ಸುಂದರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಉಪವಿಭಾಗದ ಉಪನಿರೀಕ್ಷಕ ಹೆಚ್.ಎನ್. ದೀಪಕ್ ಸನ್ಮಾನಿತರ ಸೇವೆಯನ್ನು ಸ್ಮರಿಸಿದರು. ಈ ಸಂದರ್ಭ ಅಂಚೆ ಮೇಲ್ವಿಚಾರಕರುಗಳಾದ ಕೆ.ಎ. ರಾಧಾಕೃಷ್ಣ, ಬಿ.ಎಸ್. ಭಾಸ್ಕರ್ ಹಾಗೂ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.