ಮಡಿಕೇರಿ, ಏ. 8: ಅಮ್ಮತ್ತಿ ಕೊಡವ ಸಮಾಜದಲ್ಲಿ ತಾ. 16 ರಂದು ಮಹಿಳಾ ದಿನಾಚರಣೆ ಹಮ್ಮಿಕೊಂಡಿರುವದಾಗಿ ಕಾರ್ಯಕ್ರಮದ ಸಂಚಾಲಕಿ ಮಚ್ಚಾರಂಡ ಶಾಲಿ ಬೋಪಣ್ಣ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಮ್ಮತ್ತಿ ಕೊಡವ ಸಮಾಜದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸುಂಟಿಕೊಪ್ಪ ವಿಶೇಷ ಮಕ್ಕಳ ಸಂಸ್ಥೆಯ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ, ಕೊಡಗಿನ ಮಹಿಳಾ ಉದ್ಯಮಿ ಕುಪ್ಪಂಡ ಛಾಯಾ ರಾಜಪ್ಪ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಮಂಡೇಪಂಡ ಕಾವೇರಿ ದೇವಯ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಅಂದು ಬೆಳಿಗ್ಗೆ 9.30 ರಿಂದ 10.30 ರವರೆಗೆ ‘ವೆಜಿಟೆಬಲ್ ಕಾರ್ವಿಂಗ್’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ನಂತರದ ಕಾರ್ಯಕ್ರಮದಲ್ಲಿ ಆರ್ಕಿಡ್ ಬೆಳೆಸುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕತೆ ನಡೆಸಲಾಗುವದು. ಅಂದು ಬೆಳಿಗ್ಗೆ 10 ಗಂಟೆಗೆ ಮುಂಚಿತವಾಗಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಉಚಿತವಾಗಿ ಲಕ್ಕಿ ಡ್ರಾ ಕೂಪನ್ ವಿತರಣೆ ಮಾಡಲಾಗುವದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9740183979 ಸಂಪರ್ಕಿಸಬಹುದು.