ಸೋಮವಾರಪೇಟೆ, ಏ. 8: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಅಜ್ಜಮಕ್ಕಡ ಅಕ್ಷಿತಾ ಕಾರ್ಯಪ್ಪ ಉತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್ ನಾಗೇಂದ್ರ ಪ್ರಕಾಶ್ ಅವರು ಭಾಗವಹಿಸಿ, ಶೈಕ್ಷಣಿಕ ಹಾಗೂ ಇತರ ಚಟುವಟಿಕೆಗಳ ಆಧಾರದ ಮೇರೆ ಅಕ್ಷಿತಾಗೆ ‘ಬೆಸ್ಟ್ ಔಟ್ ಸ್ಟ್ಯಾಂಡಿಂಗ್ ಸ್ಟೂಡೆಂಟ್’ ಪ್ರಶಸ್ತಿಯನ್ನು ವಿತರಿಸಿದರು.
ಈಕೆ ಸೋಮವಾರಪೇಟೆ ಸಮೀಪದ ಕಾನ್ವೆಂಟ್ ಬಾಣೆ ನಿವಾಸಿ, ಕೆಎಸ್‍ಆರ್‍ಟಿಸಿಯಲ್ಲಿ ಸಂಚಾರ ನಿಯಂತ್ರಕರಾಗಿರುವ ಅಜ್ಜಮಕ್ಕಡ ಕಾರ್ಯಪ್ಪ ದಂಪತಿಯ ಪುತ್ರಿ.