ಸೋಮವಾರಪೇಟೆ, ಏ. 8: ಇಲ್ಲಿಗೆ ಸಮೀಪದ ಕೆಂಚಮ್ಮನ ಬಾಣೆಯ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಯುವಕ ಸಂಘದ ಆಶ್ರಯದಲ್ಲಿ ನಡೆದ ಕ್ರೀಡೋತ್ಸವ ಸಮಾರಂಭದಲ್ಲಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶೋಭ ಮಂದಣ್ಣ ರವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಯುವಕ ಸಂಘದ ಅಧ್ಯಕ್ಷ ಕೆ.ಎ. ದಿನೇಶ್ ವಹಿಸಿದ್ದರು. ವೇದಿಕೆಯಲ್ಲಿ ಹಳ್ಳದಿಣ್ಣೆ-ಕುಸುಬೂರು ಗ್ರಾಮದ ಮುನೇಶ್ವರ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಸಿ. ಸುಂದರ್, ಬೇಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂದಣ್ಣ, ತೋಳೂರುಶೆಟ್ಟಳ್ಳಿ ಮೊಗೇರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಶಿವಪ್ಪ, ಗ್ರಾಪಂ ಸದಸ್ಯರುಗಳಾದ ಕೆ.ಪಿ. ಹರೀಶ್, ಶಶಿಕಲಾ, ಮೀನಾ ರವಿ, ಮಾಜಿ ಸದಸ್ಯರುಗಳಾದ ಪಾರ್ವತಿ ರಾಮಣ್ಣ, ರತ್ನ ಕೃಷ್ಣ, ಮೊಗೇರಾ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಬಿ. ಶಿವಪ್ಪ, ರಾಜ್ಯ ಸಮಿತಿ ಸದಸ್ಯ ಪಿ.ಕೆ. ಚಂದ್ರು, ಆಶಾ ಕಾರ್ಯಕರ್ತೆ ನಾಗಮಣಿ ಮಹದೇವ್ ಹಾಗೂ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.