ಗೋಣಿಕೊಪ್ಪಲು, ಏ. 8: ಕೊಟ್ಟಗೇರಿಯಲ್ಲಿ ಅರಣ್ಯ ಸಿಬ್ಬಂದಿಗಳು ಹುಲಿ ಸೆರೆಗೆ ಕೂಂಬಿಂಗ್ ನಡೆಸುತ್ತಿದ್ದರೆ ಇತ್ತ ಲಕ್ಷ್ಮಣತೀರ್ಥ ಸಮೀಪದ ಹೊಳೆಯ ಅನತಿ ದೂರದಲ್ಲಿರುವ ಕಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಕ್ಕೆಸೊಡ್ಲೂರು ಗ್ರಾಮದ ವಿಧವಾ ಮಹಿಳೆ ತಾಣಚ್ಚಿರ ರೋಹಿಣಿ ವಿಶ್ವನಾಥ್ ಎಂಬವರ ಕೊಟ್ಟಿಗೆಯಲ್ಲಿದ್ದ ಕರುವನ್ನು ಹುಲಿ ಕೊಂದು ಹಾಕಿದೆ.

ಒಂಟಿ ಮನೆಯ ಸಮೀಪವಿರುವ ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಮಧ್ಯರಾತ್ರಿ 12.30ರ ಸಮಯದಲ್ಲಿ ಧಾಳಿ ನಡೆಸಿದ ಸಂದರ್ಭ ಹಸು ಜೋರಾಗಿ ಕಿರುಚಿಕೊಂಡಾಗ ರೋಹಿಣಿ ಹೊರಗೆ ಬರುವ ಧÉೈರ್ಯ ಮಾಡದೇ ಮನೆಯ ಕಿಟಕಿಯಿಂದ ಒಲೆ ಊದುವ ಕೊಳವೆಯಿಂದ ಜೋರಾಗಿ ಸದ್ದು ಮಾಡಿದ್ದಾರೆ. ಈ ಸದ್ದಿಗೆ ಹುಲಿಯು ಕರುವನ್ನು ಸಾಯಿಸಿ ಅಲ್ಲಿಂದ ತೆರಳಿದೆ. ಇದರಿಂದ ಹಸುವಿನ ಪ್ರಾಣ ಉಳಿದಿದೆ. ಮುಂಜಾನೆ ಎದ್ದು ಕೊಟ್ಟಿಗೆಯನ್ನು ನೋಡಿದಾಗ ಕರು ಸಾವನ್ನಪ್ಪಿತ್ತು.

ರೋಹಿಣಿ ತನ್ನ 35ರ ಪ್ರಾಯದ ಬುದ್ದಿಮಾಂಧÀ್ಯ ಮಗನೊಂದಿಗೆ ವಾಸವಿದ್ದು, ಈತನ ಆರೋಗ್ಯಕ್ಕೆ ಪ್ರತಿದಿನ ಎರಡು ಲೀ.ನಷ್ಟು ಹಾಲು ಈಕೆ ಸಾಕಿದ ಹಸುವಿನಿಂದ ಆರೋಗ್ಯ ಸುಧಾರಿಸುತ್ತಿತ್ತು. ಇದೀಗ ಮಹಿಳೆ ಕಂಗಲಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ನೊಂದ ಮಹಿಳೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯೆ ಶಿಲ್ಪ ಅಪ್ಪಣ್ಣ, ಆರ್‍ಎಂ.ಸಿ. ನಿರ್ದೇಶಕ ಮಾಚಂಗಡ ಸುಜಾ ಪೂಣಚ್ಚ, ಗ್ರಾಮಸ್ಥರಾದ ಗುಡಿಯಂಗಡ ಗಿರೀಶ್, ಸುಳ್ಳಿಮಾಡ ಸೋಮಯ್ಯ, ಎಂ.ಎಸ್. ಬೋಸ್, ಎಂ.ಕೆ. ಸಂಪತ್, ಎಂ.ಬಿ. ಮನು, ಎಸ್.ಡಿ. ಸುಬ್ಬಯ್ಯ ಇನ್ನಿತರರು ಹಾಜರಿದ್ದರು.