ಮಡಿಕೇರಿ, ಏ. 6: ಆಫ್ ರೋಡರ್ಸ್ ಕೂರ್ಗ್ ಸಂಸ್ಥೆಯ ವತಿಯಿಂದ ತಾ. 7 ರಂದು (ಇಂದು) ಅಮ್ಮತ್ತಿಯಲ್ಲಿ ರೋಮಾಂಚನಕಾರಿಯಾದ ದ್ವಿತೀಯ ವರ್ಷದ ‘ಅಮ್ಮತ್ತಿ ರ್ಯಾಲಿಕ್ರಾಸ್ - 2018’ ಆಫ್‍ರೋಟ್ ಸ್ಪರ್ಧೆ ಜರುಗಲಿದ್ದು, ಸಂಘಟಕರು ಅಗತ್ಯ ಸಿದ್ಧತೆ ನಡೆಸಿದ್ದಾರೆ.

ಕರ್ನಾಟಕ ಸೇರಿದಂತೆ ನೆರೆರಾಜ್ಯಗಳ ಸ್ಪರ್ಧಿಗಳು ಭಾಗವಹಿಸಲಿದ್ದು, ರ್ಯಾಲಿಗೆಂದೇ ಸಜ್ಜುಗೊಳಿಸಲಾಗಿರುವ ವಿಶೇಷ ಸ್ಥಳದಲ್ಲಿ ವಾಹನಗಳ ಭರಾಟೆ ಕಂಡು ಬರಲಿದೆ. ರೋಮಾಂಚನಕಾರಿಯಾಗಿ ಜರುಗಲಿರುವ ಈ ಸ್ಪರ್ಧೆಯಲ್ಲಿ ರ್ಯಾಲಿಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದು, ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.