ಮಡಿಕೇರಿ, ಏ. 6: ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಕಾರ್ಯವನ್ನು ಸುಗಮಗೊಳಿಸುವ ಉದ್ದೇಶದಿಂದ ವಾಹನ ಮಾಲೀಕರು ವಾಹನದ ತತ್ಸಂಬಂಧ ದಾಖಲಾತಿಗಳನ್ನು ವಾಹನದಲ್ಲಿಟ್ಟುಕೊಂಡು, ವಾಹನದ ದಾಖಲಾತಿಗಳಲ್ಲಿ ವ್ಯತ್ಯಯವಿದ್ದಲ್ಲಿ ಆ ವಾಹನಗಳನ್ನು ಸಾರ್ವಜನಿಕ ರಸ್ತೆಯಲ್ಲಿ ಬಳಸಬಾರದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ ಅವರು ತಿಳಿಸಿದ್ದಾರೆ.

ವಾಹನವು ಯಾವೊಂದು ಕಾರಣದಲ್ಲಿ ನೋಂದಣಿಯಾಗಿರುತ್ತದೆಯೋ ಅದೇ ಕಾರಣಕ್ಕೆ ಮಾತ್ರ ಸಂಚರಿಸಬೇಕು. ಹಾಗೆಯೇ ವಾಹನದಲ್ಲಿ ಇನ್ನಿತರ ಲೋಪದೋಷಗಳು ಕಂಡುಬಂದಂತಹ ಸಮಯದಲ್ಲಿ, ಆ ಕೂಡಲೇ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಸರ್ಕಾರದ ವಶಕ್ಕೆ ನೀಡಲಾಗುವದು ಎಂದು ಅವರು ಎಚ್ಚರಿಸಿದ್ದಾರೆ.