ಮಡಿಕೇರಿ, ಏ. 4: ವೀರಾಜಪೇಟೆ ವಿಭಾಗ ವ್ಯಾಪ್ತಿಯಲ್ಲಿ ವಿವಿಧ ಅರಣ್ಯ ಅಪರಾಧ ಪ್ರಕರಣಗಳಲ್ಲಿ ಯಾವದೇ ಊರ್ಜಿತ ದಾಖಲೆಗಳಿಲ್ಲದೆ ಅರಣ್ಯ ಉತ್ಪನ್ನಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಟಾಟ 407/31, (ಕೆಎ-08-0407), ಹೆಬ್ಬಲಸು ಮರಗಳಿಂದ ತುಂಬಿದ್ದ ವಾಹನವನ್ನು ಅಮಾನತ್ತು ಪಡಿಸಿಕೊಂಡಿದ್ದು, ಈವರೆಗೂ ಈ ವಾಹನದ ಬಗ್ಗೆ ಯಾರಿಂದಲೂ ಹಕ್ಕುಭಾಧ್ಯತೆ ಬಂದಿರುವದಿಲ್ಲ. ಈ ಹಿನ್ನೆಲೆಯಲ್ಲಿ ವಾಹನದ ಮಾಲೀಕತ್ವವನ್ನು ರುಜುವಾತುಪಡಿಸಲು ಸಂಪೂರ್ಣ ದಾಖಲಾತಿಗಳೊಂದಿಗೆ ಅಹವಾಲನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ, ವೀರಾಜಪೇಟೆ ವಿಭಾಗ ಇವರಲ್ಲಿ ಸಲ್ಲಿಸಬಹುದಾಗಿದೆ. ಯಾವದೇ ಅಹವಾಲು ಬಾರದಿದ್ದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 71 (ಎ) ಯಿಂದ (ಜಿ) ಪ್ರಕಾರ ಈ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮರಿಯಾ ಕ್ರಿಸ್ತು ರಾಜು ತಿಳಿಸಿದ್ದಾರೆ.