ಮಡಿಕೇರಿ, ಏ. 4: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಣ್ಣಿಮಾನಿ ಗ್ರಾಮದ ನಿವಾಸಿ ದೇವಂಗೋಡಿ ಗಣೇಶ್ (44) ಎಂಬವರು ಮಾರ್ಚ್ 28 ರಂದು ತಮ್ಮ ಬೈಕ್‍ನಲ್ಲಿ (ಕೆಎ03 ಇಎ6036) ಭಾಗಮಂಡಲಕ್ಕೆ ಹೋಗಿ ಬರುವದಾಗಿ ತೆರಳಿದವರು ಇನ್ನೂ ಹಿಂತಿರುಗಿಲ್ಲ ಎಂದು ಇವರ ಪತ್ನಿ ಮೀನಾಕ್ಷಿ ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಬಗ್ಗೆ ಸುಳಿವು ದೊರೆತಲ್ಲಿ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವಂತೆ ಇಲಾಖಾ ಪ್ರಕಟಣೆ ಕೋರಿದೆ.