ಕೂಡಿಗೆ, ಏ. 3: ಕುಶಾಲನಗರ ಇನ್ನರ್ ವೀಲ್ ಕ್ಲಬ್ ವತಿಯಿಂದ ಕೂಡಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತವಾಗಿ ಕ್ರೀಡಾ ಸಾಮಗ್ರಿ ಹಾಗೂ ವಾಟರ್ ಫೀಲ್ಟರ್, ಕುರ್ಚಿಗಳು, ಶಬ್ದ ನಿಘಂಟು ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಕುಶಾಲನಗರ ಇನ್ನರ್ ವೀಲ್ ಕ್ಲಬ್‍ನ ಹೊಸ ಯೋಜನೆ ಹ್ಯಾಪಿ ಸ್ಕೂಲ್ ಯೋಜನೆಯಡಿಯಲ್ಲಿ ಕ್ಲಬ್‍ನ ಅಧ್ಯಕ್ಷೆ ರೇಖಾ ಗಂಗಾಧರ್ ಅವರು ಶಾಲಾ ಮುಖ್ಯೋಪಾಧ್ಯಾಯಿನಿ ವಾಣಿ ಅವರಿಗೆ ಹಸ್ತಾಂತರಿಸಿದರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಅನಸೂಯ ವಹಿಸಿದ್ದರು. ಈ ಸಂದರ್ಭ ಕುಶಾಲನಗರ ಇನ್ನರ್ ವೀಲ್ ಕ್ಲಬ್‍ನ ಕಾರ್ಯದರ್ಶಿ ಸುನೀತ ಮಹೇಶ್, ಯೋಜನಾ ಕಾರ್ಯದರ್ಶಿ ಶಾಲಿನಿ ನರೇಂದ್ರ, ಕ್ಲಬ್‍ನ ನಿರ್ದೇಶಕರಾದ ಸಂದ್ಯ, ಪ್ರಮೋದ್, ಅನುಪಮ, ಅಶ್ವಿನಿ ಆರ್, ಚಿತ್ರ, ಶಾಲಾಭಿವೃದ್ಧಿ ಸಮಿತಿಯ ನಿರ್ದೇಶಕ ಕೆ.ಕೆ. ನಾಗರಾಜ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ವಾಣಿ, ಸಹ ಶಿಕ್ಷಕರಾದ ಭಾಗ್ಯಮ್ಮ, ವಿಜಯಲಕ್ಷ್ಮಿ ಇದ್ದರು.