ಸಿದ್ದಾಪುರ, ಏ. 3: ಸಮೀಪದ ಹುಂಡಿಯ ಫ್ರೀಡಂ ಬಾಯ್ಸ್ ಯುವಕ ಸಂಘದ ವತಿಯಿಂದ 3ನೇ ವರ್ಷದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಏರ್ಪಡಿಸಿರುವದಾಗಿ ಸಂಘದ ಅಧ್ಯಕ್ಷ ನಿಯಾಸ್ ತಿಳಿಸಿದ್ದಾರೆ.

ಹುಂಡಿಯ ಶಾಲಾ ಮೈದಾನದಲ್ಲಿ ತಾ. 29 ಹಾಗೂ 30 ರಂದು ಪಂದ್ಯಾಟ ನಡೆಯಲಿದ್ದು, ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸುವ ತಂಡಕ್ಕೆ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವದು. ಆಸಕ್ತ ತಂಡಗಳು 8880003143, 9741515289 ಸಂಖ್ಯೆಗೆ ತಾ. 20 ರೊಳಗೆ ತಂಡವನ್ನು ನೋಂದಾಯಿಸಿಕೊಳ್ಳಬಹುದೆಂದು ತಿಳಿಸಿದ್ದಾರೆ.