ಭಾಗಮಂಡಲ, ಏ. 2: ಕೆದಂಬಾಡಿ ಕ್ರಿಕೆಟ್ ಕ್ಲಬ್ ವತಿಯಿಂದ ಇಲ್ಲಿಗೆ ಸಮೀಪದ ಕೆದಂಬಾಡಿ ಆಟದ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ 25ನೇ ವರ್ಷದ ಕ್ರಿಕೆಟ್ ಉತ್ಸವದಲ್ಲಿ ಕೊಳಂಬೆ ಹಾಗೂ ಪರ್ಲಕೋಟಿ ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ದಬ್ಬಡ್ಕ ತಂಡ 5 ವಿಕೆಟ್‍ಗೆ 45 ರನ್ ಗಳಿಸಿದರೆ, ಪಡುಮಜಲು ತಂಡ 6 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಕೊಳಂಬೆ ಹಾಗೂ ಚೆಟ್ಟಿಮಾಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕೊಳಂಬೆ ತಂಡ 1 ವಿಕೆಟ್ ನಷ್ಟದಲ್ಲಿ ಅತ್ಯಧಿಕ 107 ರನ್ ಪೇರಿಸಿದರೆ, ಉತ್ತರವಾಗಿ ಆಡಿದ ಚೆಟ್ಟಿಮಾಡ ತಂಡ 9 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿ ಸೋಲನುಭವಿಸಿತು.

ಪಡುಮಜಲು ಹಾಗೂ ಕೊಳಂಬೆ ತಂಡಗಳ ನಡುವಿನ ಪಂದ್ಯದಲ್ಲಿ ಕೊಳಂಬೆ ತಂಡ 7 ವಿಕೆಟ್‍ಗೆ 78 ರನ್ ಗಳಿಸಿದೆ, ಪಡುಮಜಲು ತಂಡ 7 ವಿಕೆಟ್ ಕಳೆದುಕೊಂಡು 49 ರನ್ ಗಳಿಸಿ ಸೋಲು ಕಂಡಿತು. ಕುಂಬಳಚೇರಿ ತಂಡ 3 ವಿಕೆಟ್‍ಗೆ 78 ರನ್ ಗಳಿಸಿದರೆ, ಕೋಟೇರ ತಂಡ 9 ವಿಕೆಟ್ ಕಳೆದುಕೊಂಡು 22 ರನ್ ಮಾತ್ರ ಗಳಿಸಿ ಸೋಲನ್ನಪ್ಪಿತು. ಮತ್ತೊಂದು ಪಂದ್ಯದಲ್ಲಿ ಕುಂಬಳಚೇರಿ ತಂಡ 6 ವಿಕೆಟ್‍ಗೆ 49 ರನ್ ಗಳಿಸಿದರೆ, ಪರ್ಲಕೋಟಿ ತಂಡ 1 ವಿಕೆಟ್ ನಷ್ಟದಲ್ಲಿ 51 ರನ್ ಗಳಿಸಿ ಗೆಲುವಿನ ನಗೆ ಬೀರಿತು.