ನಾಪೆÉÇೀಕ್ಲು, ಏ. 2: ನಾಪೆÇೀಕ್ಲು ಪಟ್ಟಣದಿಂದ ಅಜ್ಜಿಮುಟ್ಟ ಗ್ರಾಮಕ್ಕೆ ಸಾಗುವ ರಸ್ತೆಯು ತೀರ ಹದಗೆಟ್ಟಿದ್ದು, ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳದಿದ್ದರೆ ಸಾಮೂಹಿಕವಾಗಿ ಮುಂದಿನ ವಿಧಾನಸಭಾ ಚುನಾವಣೆ ಯನ್ನು ಬಹಿಷ್ಕರಿಸಲಾಗುವದು ಎಂದು ಈ ವ್ಯಾಪ್ತಿಯ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಸ್ವಾತಂತ್ರ್ಯ ಬಂದು 71 ವರ್ಷ ಕಳೆದರೂ ಈ ಭಾಗದ ರಸ್ತೆಗಳು ಇನ್ನೂ ಅಭಿವೃದ್ಧಿಯಾಗಿಲ್ಲ. ಈ ವ್ಯಾಪ್ತಿಯಲ್ಲಿ ಸುಮಾರು 300 ಕ್ಕೂ ಅಧಿಕ ಕುಟುಂಬದವರು ವಾಸಿಸುತ್ತಿದ್ದಾರೆ. ಸರಕಾರಿ ಪ್ರಾಥಮಿಕ ಶಾಲೆಯೂ ಇದೆ. ಆದರೆ ವಾಹನ ಸಂಚಾರಕ್ಕೆ ರಸ್ತೆ ಯೋಗ್ಯವಿಲ್ಲ ದಂತಾಗಿದೆ. ಆಟೋ ರಿಕ್ಷಾಗಳು ಕೂಡ ಈ ವ್ಯಾಪ್ತಿಯಲ್ಲಿ ಸಂಚರಿಸಲು ಆಸಕ್ತಿ ತೋರುತ್ತಿಲ್ಲ. ಎಲ್ಲರೂ ಕಾಲ್ನಡಿಗೆಯಲ್ಲಿ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಚುನಾವಣೆ ಸಮೀಪಿಸಿದಾಗ ಮಾತ್ರ ಜನಪ್ರತಿನಿಧಿಗಳು ಭರವಸೆಗಳ ಮಹಾಪೂರವನ್ನೇ ಹರಿಸುತ್ತಾರೆ. ಗೆದ್ದ ನಂತರ ಇತ್ತ ತಿರುಗಿಯೂ ನೋಡುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಡಾ. ಸಣ್ಣುವಂಡ ಕಾವೇರಪ್ಪ ಮತ್ತು ಅರೆಯಡ ವಿಠಲ್ ಮೊಣ್ಣಪ್ಪ ಈ ರಸ್ತೆಯು ಕೂರುಳಿ, ಎಮ್ಮೆಮಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಕಳೆದ 15 ವರ್ಷಗಳಿಂದ ನಿರಂತರವಾಗಿ ಈ ವಿಭಾಗದ ಜನರು ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವದೇ ಬದಲಾವಣೆಯಾಗಿಲ್ಲ. ಕನಿಷ್ಟ ಗುಂಡಿ ಮುಚ್ಚ್ಚುವ ಕೆಲಸವಾಗಿಲ್ಲ ಎಂದು ದೂರಿದರು.

ಚುನಾವಣೆಯೊಳಗೆ ಈ ರಸ್ತೆ ದುರಸ್ತಿ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸಲಾಗು ವದೆಂದು ಎಚ್ಚರಿಸಿದರು.

ಈ ಸಂದರ್ಭ ಕಂಗಾಂಡ ಪಟ್ಟು ಪೆÇನ್ನಪ್ಪ, ತಿರೋಡಿರ ರಾಜ ಉತ್ತಯ್ಯ, ತಿರೋಡಿರ ಮುದ್ದಪ್ಪ, ಬಾಳೆಯಡ ಜಗ ಅಯ್ಯಪ್ಪ, ಬಾಳೆಯಡ ಶಂಭು, ಮಂದಪ್ಪ, ಅರೆಯಡ ಕಿರಣ್, ಚಂಗುಲಂಡ ಶಂಭು, ಬಾಳೆಯಡ ರಾಜೇಶ್, ಬಾಳೆಯಡ ಪ್ರಕಾಶ್, ಮೊಟ್ಟೆಪಂಡ ಸುರೇಶ್, ರಷೀದ್, ಇಸ್ಮಾಯಿಲ್, ಮತ್ತಿತರರು ಇದ್ದರು.