ಮಡಿಕೇರಿ, ಮಾ. 31: ಕೊಡಗು ಜಿಲ್ಲಾ ಬಂಟರ ಸಂಘದ 5ನೇ ವರ್ಷದ ಜಿಲ್ಲಾಮಟ್ಟದ ವಾರ್ಷಿಕ ಕ್ರೀಡೋತ್ಸವ ಮೇ 18 ರಿಂದ 20 ರವರೆಗೆ ವೀರಾಜಪೇಟೆಯ ನೀಲುಮಾಡು ಹೋಬಳಿ ಬಂಟರ ಸಂಘದ ಆಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಮತ್ತು ಪದಾಧಿಕಾರಿಗಳು, ಈ ಹಿಂದೆ ಜಿಲ್ಲಾ ಮಟ್ಟದ ಕ್ರೀಡೋತ್ಸವವನ್ನು ಮೇ 11 ರಿಂದ 13 ರವರೆಗೆ ಆಯೋಜಿಸ ಲಾಗಿತ್ತಾದರೂ, ವಿಧಾನಸಭಾ ಚುನಾ ವಣೆಯ ಹಿನ್ನೆಲೆ ಪಂದ್ಯಾವಳಿಯನ್ನು ಮುಂದೂಡಲಾಗಿದೆ ಎಂದರು.

ಮೇ 18 ರಂದು ಕ್ರೀಡೋತ್ಸವ ವನ್ನು ಉದ್ಯಮಿ ಜಗದೀಶ್ ರೈ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನೀಲುಮಾಡು ಗುತ್ತುವಿನ ಯಜಮಾನ ದೇವಪ್ಪ ರೈ ವಹಿಸಲಿದ್ದಾರೆ. ಮೇ 20 ರಂದು ಸಂಜೆ 5.30 ಗಂಟೆಗೆ ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ನಾರಾಯಣ ರೈ ಅಧ್ಯಕ್ಷತೆಯಲ್ಲಿ ಸಮಾ ರೋಪ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಒಡಿಯೂರುವಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಶ್ವ ಹಿಂದೂ ಪರಿಷದ್‍ನ ದಕ್ಷಿಣ ಕನ್ನಡ ಜಿಲ್ಲಾ ಗೋರಕ್ಷಾ ಪ್ರಮುಖ್ ಅಶೋಕ್ ಶೆಟ್ಟಿ ಸರಪ್ಪಾಡಿ ಹಾಗೂ ಮಂಗಳೂರಿನ ಕೋಸ್ಟಲ್ ಫಾಮ್ರ್ಸ್‍ನ ವ್ಯವಸ್ಥಾಪಕ ಪಾಲುದಾರ ಪಿ.ಎಸ್. ಪ್ರಕಾಶ್ ಶೆಟ್ಟಿ ವಿಶೇಷ ಆಹ್ವಾನಿತರಾಗಿ ಭಾಗವಹಿಸ ಲಿದ್ದಾರೆ. ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷ ರಮೇಶ್ ರೈ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೃಷ್ಣಪ್ಪ ಶೆಟ್ಟಿ, ವೀರಾಜಪೇಟೆಯ ವಕೀಲ ರತ್ನಾಕರ ಶೆಟ್ಟಿ, ಉದ್ಯಮಿ ಬಾಲಕೃಷ್ಣ ರೈ, ಮಡಿಕೇರಿ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಶಶಿಕಲಾ ಲೋಕೇಶ್ ರೈ, ನಗರ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಕುಶಲತಾ ಶೆಟ್ಟಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕ್ರೀಡಾಕೂಟದಲ್ಲಿ ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, 100 ಮೀಟರ್ ಓಟ, ಗುಂಡು ಎಸೆತ, ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ, ಬಾಂಬ್ ಸ್ಫೋಟ, 100 ಮೀಟರ್ ಓಟ, ಗುಂಡು ಎಸೆತ, ಮಕ್ಕಳಿಗೆ ಕಪ್ಪೆ ಜಿಗಿತ, 50 ಮೀಟರ್ ಓಟದ ಸ್ಪರ್ಧೆಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕಳೆದ ಬಾರಿ ಕ್ರಿಕೆಟ್ ಪಂದ್ಯಾಟದಲ್ಲಿ 42 ತಂಡಗಳು ಭಾಗವಹಿಸಿದ್ದು, ಈ ಬಾರಿ ಇನ್ನೂ ಹೆಚ್ಚಿನ ತಂಡಗಳನ್ನು ನಿರೀಕ್ಷಿಸಲಾಗಿದೆ. ತಂಡಗಳ ನೋಂದಣಿಗೆ ತಾ. 13 ಕೊನೆಯ ದಿನವಾಗಿದ್ದು, ನೀಲು ಮಾಡು ಹೋಬಳಿಯ ಕ್ರೀಡಾಕೂಟದ ಆಯೋಜಕರನ್ನು ಸಂಪರ್ಕಿಸಿ ತಂಡಗಳನ್ನು ನೋಂದಣಿ ಮಾಡಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗೆ 7619433531, 9482923541, 9483000930ನ್ನು ಸಂಪರ್ಕಿಸ ಬಹುದೆಂದು ತಿಳಿಸಿದರು.

ಮಡಿಕೇರಿ ತಾಲೂಕು ಬಂಟರ ಸಂಘದ ಯುವ ಘಟಕದ ಅಧ್ಯಕ್ಷ ಶರತ್ ಶೆಟ್ಟಿ ಮಾತನಾಡಿ, ಸಮಾರೋಪ ಸಮಾರಂಭದ ಬಳಿಕ ತುಳು ಚಿತ್ರರಂಗದ ಹಾಸ್ಯನಟ ಮಂಜುರೈ ಮೂಳೂರು ನಿರೂಪಣೆ ಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ವೀರಾಜಪೇಟೆಯ ನಕ್ಷತ್ರ ನೃತ್ಯ ಕಲಾ ತಂಡದಿಂದ ನವಶಕ್ತಿ ವೈಭವ ಮಹಿಷಾಸುರ ವಧೆ ಮತ್ತು ಯಕ್ಷ ನೃತ್ಯ ಸೇರಿದಂತೆ ‘ಬಂಟರ ಪ್ರತಿಭೆಗಳ ಸಾಂಸ್ಕøತಿಕ ಕಲರವ’ ಜರುಗಲಿದೆ.

ಸಾಂಸ್ಕøತಿಕ ಕಾರ್ಯಕ್ರಮ ನೀಡಲಿಚ್ಛಿಸುವ ಬಂಟರ ಸಮುದಾಯದ ಪ್ರತಿಭೆಗಳು ಮೇ 2 ರೊಳಗಾಗಿ ಹೆಸರುಗಳನ್ನು 9663175124ರಲ್ಲಿ ನೋಂದಾಯಿಸ ಬೇಕು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ನಾರಾಯಣ ರೈ, ಮಡಿಕೇರಿ ತಾಲೂಕು ಅಧ್ಯಕ್ಷ ರಮೇಶ್ ರೈ ಹಾಗೂ ಕ್ರೀಡಾ ಆಯೋಜನಾ ಸಮಿತಿ ಅಧ್ಯಕ್ಷ ಬಿ.ಎಸ್. ಲೀಲಾಧರ ರೈ ಉಪಸ್ಥಿತರಿದ್ದರು.