ವೀರಾಜಪೇಟೆ, ಮಾ. 31: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಅಂಡ್ ಕಲ್ಚರಲ್ ಅಸೋಸಿಯೇಶನ್‍ನ ನೂತನ ಕಚೇರಿಯನ್ನು ಇಲ್ಲಿನ ಗೋಣಿಕೊಪ್ಪ ರಸ್ತೆಯ ಡಿ.ಎಂ.ಆರ್. ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಪಿ.ಎ. ಹನೀಫ್ ಉದ್ಘಾಟಿಸಿದರು.

ಈ ಸಂದರ್ಭ ಕಾರ್ಯಾಧ್ಯಕ್ಷ ಪಿ.ಎ. ಕರೀಮ್, ಉಪಾಧ್ಯಕ್ಷ ಆರ್.ಕೆ. ಅಬ್ದಲ್ ಸಲಾಂ, ಕೋಶಾಧಿಕಾರಿ ಹೆಚ್.ಎ. ಹಂಸ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್, ನಿರ್ದೇಶಕ ಎ.ಎಂ. ಅಬ್ದುಲ್ಲ, ಎಂ.ವೈ. ಆಲಿ, ಮನ್ಸೂರ್ ಆಲಿ, ವೈ.ಎಂ. ಹಂಸ ನಾಪೋಕ್ಲು ಇಸ್ಮಾಯಿಲ್, ಬಾಪು, ಮಕ್ಕಿ ನಾಸರ್, ಫೈಜಲ್, ರಫೀಕ್, ರಾಸಿಕ್ ಹಾಜರಿದ್ದರು.

ನಂತರ ನಡೆದ ಸಭೆಯಲ್ಲಿ ತಾ. 6, 7 ಮತ್ತು 8 ರಂದು ವಾಲಿಬಾಲ್ ಪಂದ್ಯಾಟವನ್ನು ನಡೆಸುವಂತೆ ತೀರ್ಮಾನಿಸಲಾಯಿತು.