ಗೋಣಿಕೊಪ್ಪ ವರದಿ: ಮತ್ತೂರು ಗ್ರಾಮದ ಶ್ರೀ ಭೂತನಾಥ ಅಯ್ಯಪ್ಪ ದೇವಸ್ಥಾನದ ವಾರ್ಷಿಕೋತ್ಸವ ಕೊಡಿಮರ ನಿಲ್ಲಿಸುವದರ ಮೂಲಕ ಪ್ರಾರಂಭಗೊಂಡಿದೆ. ತಾ. 3 ರಂದು ದೇವರ ದರ್ಶನ ಮತ್ತು ವಿವಿಧ ಪೂಜೆಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಭಗವತಿ ಚಾಮುಂಡಿ ಉತ್ಸವ

ನಾಪೋಕ್ಲು: ಸಮೀಪದ ಕೈಕಾಡು ಗ್ರಾಮದ ಶ್ರೀ ಭಗವತಿ ಚಾಮುಂಡಿ ದೇವರ ವಾರ್ಷಿಕ ಉತ್ಸವ ತಾ. 2 ರಿಂದ ನಡೆಯಲಿದೆ. ತಾ. 2 ರಂದು ಕೊಟ್ಟಿಪಾಡುವದು, ತಾ. 3 ರಂದು ಎತ್ತುಪೋರಾಟ, ವಿಶೇಷ ಪೂಜೆ, ರಾತ್ರಿ ಅಲಂಕಾರ ಪೂಜೆ, ಅನ್ನದಾನ, ಮೆಲೇರಿಗೆ ಬೆಂಕಿ ಹಾಗೂ ಐದು ಕೂಟು ಮೂರ್ತಿ ದೈವಗಳ ಕೋಲ ನಡೆಯಲಿದೆ. ತಾ. 4 ರಂದು ಚಾಮುಂಡಿ ಮೇಲೆರಿ ನಡೆಯಲಿದ್ದು ವಾರ್ಷಿಕ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ದೇವಾಲಯದ ಪ್ರಕಟಣೆ ಕೋರಿದೆ.

ದೇವರ ವಾರ್ಷಿಕ ಮಹೋತ್ಸವ

ಗೋಣಿಕೊಪ್ಪ ವರದಿ: ಈಚೂರು ಗ್ರಾಮದ ಶ್ರೀ ಪಡುವೇರಿ ದಬ್ಬೆಚ್ಚಮ್ಮ ದೇವರ ವಾರ್ಷಿಕ ಮಹೋತ್ಸವ ತಾ. 2 ರಿಂದ 4 ರವರೆಗೆ ನಡೆಯಲಿದೆ. ತಾ. 2 ರಂದು ನೆರಪು ಮತ್ತು ವಿವಿಧ ಪೂಜೆಗಳು ನಡೆಯುತ್ತದೆ.

ಚಾಮುಂಡೇಶ್ವರಿ ಉತ್ಸವ

ವೀರಾಜಪೇಟೆ: ವೀರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದ ಚಾಮುಂಡಿ ದೇವಸ್ಥಾನದ, ಚಾಮುಂಡೇಶ್ವರಿ ದೇವರ ಉತ್ಸವವನ್ನು ತಾ. 4 ಮತ್ತು 5 ರಂದು ಆಚರಿಸಲಾಗುವದು ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಮಾಳೇಟಿರ ಗಣೇಶ್ ಕಾರ್ಯಪ್ಪ ತಿಳಿಸಿದ್ದಾರೆ.

ತಾ. 4 ರಂದು ರಾತ್ರಿ 8 ಗಂಟೆಗೆ ಉತ್ಸವ ಆರಂಭವಾಗಲಿದ್ದು ಮಾರನೇ ದಿನ ರಾತ್ರಿಯ ತನಕವೂ ನಡೆಯಲಿದೆ. ತಾ. 5 ರಂದು ಬೆಳಿಗ್ಗೆ 8 ಗಂಟೆಗೆ ವಿಷ್ಣುಮೂರ್ತಿ ಕೋಲ 11 ಗಂಟೆಗೆ ಚಾಮುಂಡಿ ಕೋಲ ನಡೆಯಲಿದೆ. ಅಪರಾಹ್ನ ಭಕ್ತಾದಿಗಳಿಗೆ ಅನ್ನದಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.