ಮಡಿಕೇರಿ, ಮಾ. 30: ಮಲ್ಲೂರು ಶ್ರೀ ಮಹಾಲಿಂಗೇಶ್ವರ ವಾರ್ಷಿಕೋತ್ಸವವು ಏ. 1 ರಂದು ಬೆಳಿಗ್ಗೆ 9 ಗಂಟೆಗೆ ಜರುಗಲಿದೆ.ಹಾಲೇರಿ : ಹಾಲೇರಿ ಶ್ರೀ ಭದ್ರಕಾಳೇಶ್ವರಿ ದೇವಿಯ ವಾರ್ಷಿಕೋತ್ಸವವು ತಾ. 27 ರಂದು ಆರಂಭಗೊಂಡಿದ್ದು ತಾ. 31 ರಂದು (ಇಂದು) ಕಾಳೆ ಓಡಿಸುವದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ.

ಏ. 1 ರಂದು ದೊಡ್ಡ ಹಬ್ಬದೊಂದಿಗೆ ಬೆ. 11 ಗಂಟೆಗೆ ಅಂಗೋಲ ಪೊಂಗೋಲ, 12 ಗಂಟೆಗೆ ಕೊಂಬಾಟ್, ಎತ್ತಾಟ್, ಬಿಲ್ಲಾಟ್ ಹಾಗೂ 1.30 ರಿಂದ ಭಂಡಾರ, ಬೊಳಕಾಟ್, ದೇವರು ಹೊರಬರುವದು, ಬಾಳೆಸೂರೆ, ತೆಂಗಿನ ಕಾಯಿಗೆ ಗುಂಡು ಹೊಡೆಯುವದು ಇತ್ಯಾದಿ ಜರುಗಲಿದೆ. ಏ. 2 ರಂದು ಮಧ್ಯಾಹ್ನ ಚಿಕ್ಕ ಹಬ್ಬ, ಕುಣಿತ, ಭಂಡಾರ, ಬಾಳೆಸೂರೆ, ಕೊಂಬು ಒಪ್ಪಿಸುವದು ನೆರವೇರಲಿದೆ. ದೊಡ್ಡ ಹಬ್ಬದಂದು ಮಧ್ಯಾಹ್ನ ಅನ್ನದಾನ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.