ವೀರಾಜಪೇಟೆ, ಮಾ. 30: ಕೆದಮುಳ್ಳೂರು ಗ್ರಾಮದ ನಿವಾಸಿ ಹಾಗೂ ಚಾಲಕ ವೃತ್ತಿಯಲ್ಲಿದ್ದ ಎಸ್.ಮಣಿಕಂಠ(32) ಎಂಬಾತ ಕಳೆದ
26-06-16ರಿಂದ ನಾಪತ್ತೆಯಾಗಿರುವದಾಗಿ ಆತನ ಪತ್ನಿ ದಿವ್ಯ ಎಂಬಾಕೆ ನಿನ್ನೆ ದಿನ ನೀಡಿದ ದೂರಿನ ಮೇರೆ ಇಲ್ಲಿನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧನೆಯಲ್ಲಿ ತೊಡಗಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಗೆ 21 ತಿಂಗಳ ಹಿಂದೆ ದೂರು ನೀಡಿದ್ದ ದಿವ್ಯ ಈ ತನಕ ಪತಿ ಮಣಿಕಂಠ ಪತ್ತೆಯಾಗದ್ದರಿಂದ ನಿನ್ನೆ ದಿನ ಮತ್ತೊಂದು ದೂರು ಸಲ್ಲಿಸಿದ್ದಾರೆ. ನಾಪತ್ತೆಯಾಗಿರುವ ಮಣಿಕಂಠ ಸುಕುಮಾರನ್ ಎಂಬವರ ಮಗನಾಗಿದ್ದು ಆತನಿಗೆ ಎರಡು ಚಿಕ್ಕ ಹೆಣ್ಣು ಮಕ್ಕಳಿದ್ದಾರೆ. ತನ್ನ ಸಂಸಾರದೊಂದಿಗೆ ಅನ್ಯೋನ್ಯವಾಗಿದ್ದ ಮಣಿಕಂಠನ್ ನಾಪತ್ತೆಯಾದ ದಿನ ಪತ್ನಿಗೆ ಪೋನ್ ಮಾಡಿ ತನಗೆ ಪಿರಿಯಾಪಟ್ಟಣದಲ್ಲಿ ಚಾಲಕನ ವೃತ್ತಿ ದೊರೆತಿದೆ ಎಂದು ತಿಳಿಸಿ ನಂತರ ಆತನ ಸುಳಿವಿಲ್ಲ ಎಂದು ಪುಕಾರಿನಲ್ಲಿ ತಿಳಿಸಲಾಗಿದೆ.