ಮಡಿಕೇರಿ, ಮಾ. 30: ಸಹೋದರರಿಬ್ಬರು ಒಂದೇ ದಿನ ಕೆಲವೇ ತಾಸುಗಳ ಅಂತರದಲ್ಲಿ ಇಹಲೋಕ ತ್ಯಜಿಸಿರುವ ಘಟನೆಯೊಂದು ವರದಿಯಾಗಿದೆ. ಹಾತೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾತೂರು ವನಭದ್ರಕಾಳಿ ದೇವಾಲಯದ ದೇವತಕ್ಕರಾಗಿದ್ದ ಕೊಂಗೇಪಂಡ ಪಾಪು ದೇವಯ್ಯ(75) ಅವರು ತಾ. 30ರ ಅಪರಾಹ್ನ 1.30ಕ್ಕೆ ನಿಧನರಾದರು. ಮೃತರು ಪತ್ನಿ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪಾಪು ದೇವಯ್ಯ ಅವರ ಮತ್ತೋರ್ವ ಸಹೋದರ ಕೊಂಗೇಪಂಡ ಸಾಬು ಮೊಣ್ಣಪ್ಪ (65) ಅವರು ಮಾಜಿ ಸೈನಿಕರಾಗಿದ್ದು, ವೀರಾಜಪೇಟೆ ಎಲ್ಐಸಿ ಉದ್ಯೋಗಿಯಾಗಿದ್ದರು. ಅನಾರೋಗ್ಯ ನಿಮಿತ್ತ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರು ಇದೇ ದಿನ ಸಂಜೆ 5.30ಕ್ಕೆ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಪಾಪು ದೇವಯ್ಯ ಅವರ ಅಂತಿಮ ದರ್ಶನ ಅವರ ಸ್ವಂತ ಮನೆಯಲ್ಲಿ ಹಾಗೂ ಸಾಬುಮೊಣ್ಣಪ್ಪ ಅವರ ಅಂತಿಮ ದರ್ಶನ ಅವರ ತಂದೆಯ ನಿವಾಸದಲ್ಲಿ ನಡೆಯಲಿದ್ದು, ತಾ. 31 ರಂದು (ಇಂದು) ಅಪರಾಹ್ನ ಒಟ್ಟಿಗೆ ಅಂತ್ಯಕ್ರಿಯೆ ನೆರವೇರಲಿದೆ.