ಭಾಗಮಂಡಲ, ಮಾ. 30: ಕೆದಂಬಾಡಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಚೆಟ್ಟಿಮಾನಿಯ ಕೆದಂಬಾಡಿ ಆಟದ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕ್ರಿಕೆಟ್ ಉತ್ಸವದಲ್ಲಿ ಪರ್ಲಕೋಟಿ, ಕುಂಬಳಚೇರಿ, ಕೋಟೇರ ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ಪೊನ್ನಚನ ತಂಡ ಬಿಳಿಯಂಡ್ರ ತಂಡವನ್ನು ಸೋಲಿಸಿದರೆ, ಪರ್ಲಕೋಟಿ ತಂಡ ಪೇರಿಯನ ತಂಡವನ್ನು ಪಾಕ ಮುಕ್ಕಾಟಿ ತಂಡ, ಅಮ್ಮವ್ವನ ತಂಡವನ್ನು ಸೋಲಿಸಿದೆ. ಮುಂದಿನ ಸುತ್ತಿನಲ್ಲಿ ಪರ್ಲಕೋಟಿ ತಂಡ, ಪೊನ್ನಚನ ತಂಡವನ್ನು, ಪಾಕಮುಕ್ಕಾಟಿ ತಂಡ ಮೇರ್ಕಜೆ ತಂಡವನ್ನು, ಅಮೆಮನೆ ತಂಡ ಹೊಸೂರು ತಂಡವನ್ನು ಚೋಂಡಿರ ತಂಡ ಕುಂಬಳಚೇರಿ ತಂಡವನ್ನು, ಕೋಟೇರ ಪಾಕ ಮುಕ್ಕಾಟಿ ತಂಡವನ್ನು, ಕುಂಬಳಚೇರಿ ತಂಡ ಅಮೆಮನೆ ತಂಡವನ್ನು ಸೋಲಿಸಿ ಮುನ್ನಡೆ ಸಾಧಿಸಿವೆ.